ಸಿದ್ದರಾಮಯ್ಯ vs ಕುಮಾರಸ್ವಾಮಿ Saaksha Tv
ರಾಮನಗರ: ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ? ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದ್ದರು. ಬಿಜೆಪಿಯವರ ಕೈಯಲ್ಲಿ ಉಗಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ವ. ರಾಜ್ಯದ ಜನರ ಬಗ್ಗೆ ನಾವು ಎಲ್ಲಿ ಚರ್ಚೆ ಮಾಡುವುದು? ರೈತರ ಸಮಸ್ಯೆಗಳ ಬಗ್ಗೆ ಎಲ್ಲಿ ಚರ್ಚೆ ಮಾಡುವುದು? ಎಂದು ಪ್ರಶ್ನಿಸಿದರು.
ರಾಷ್ಟ್ರಧ್ವಜದ ಬಗ್ಗೆ ಇವರೊಬ್ಬರೇ ಗೌರವವಿಟ್ಟಿಲ್ಲ. ಅದಕ್ಕೆ ಹೇಳಿದ್ದೇನೆ ಬೀದಿಲಿ ಹೋರಾಟ ಮಾಡಿ, ಸದನ ಮುಂದೂಡಿ. ಇಲ್ಲ ಅಮಾನತ್ತು ಮಾಡಿ. ಪ್ರತಿನಿತ್ಯ ಒಂದೂವರೆ ಕೋಟಿ ರಾಜ್ಯದ ಜನರ ಹಣ ಸದನಕ್ಕಾಗಿ ಖರ್ಚಾಗುತ್ತಿದೆ. ಆದರೆ ಅದನ್ನು ಇವರು ವ್ಯರ್ಥ ಮಾಡುತ್ತಿದ್ದಾರೆ. ಇದು ನೀವು ದೇಶ ಕಟ್ಟೋರಾ. ಅದನ್ನು ನಾನು ಕಾಂಗ್ರೆಸ್ ನಾಯಕರಿಗೆ ಕೇಳುತ್ತೇನೆ ಎಂದು ಹೇಳಿದರು.
ಮೇಕೆದಾಟು 2ನೇ ಪಾದಯಾತ್ರೆಯಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಇದರಿಂದ ಮೇಕೆದಾಟು ಆಗುತ್ತದೆ. ಇವರೊಂದಿಗೆ ಲೀಗಲ್ ಆಗಿ ನಾವು ಗೆಲ್ಲಬೇಕಿದೆ. ರಾಜ್ಯದಲ್ಲಿ ಎಷ್ಟು ಡ್ಯಾಂಗಳ ಕೆಲಸ ನಿಂತಿವೆ. ರಾಜ್ಯದ ನೀರಾವರಿ ಯೋಜನೆ ಬಳಕೆಗೆ 2 ರಿಂದ 5 ಲಕ್ಷ ಕೋಟಿ ಹಣ ಬೇಕು. ನಿಮ್ಮ ಹೋರಾಟದಿಂದ ಆಗುವುದಾದರೆ ನಾನು ನಿಮ್ಮ ಜೊತೆ ಬರುತ್ತೇನೆ ಎಂದು ಹೇಳಿದ್ದಾರೆ.
ನನ್ನ ಕರ್ಮಭೂಮಿಯಲ್ಲಿ ಇವರು ಏನು ಮಾಡಲು ಆಗಲ್ಲ. ಈ ಜನರು ಇರುವವರೆಗೆ ನನ್ನನ್ನ ಅಲ್ಲಾಡಿಸಲು ಆಗಲ್ಲ, ನನ್ನನ್ನ ಓಡಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಹತ್ತು ಪಾದಯಾತ್ರೆ ಮಾಡಲಿ ಸರಿ ಜನರ ಒಳ್ಳೆಯದಕ್ಕೆ ಮಾಡಲಿ. ಆದರೆ ದಿನ ಬಿರಿಯಾನಿ, ಬಾಳೆಕಾಯಿ ಬಜ್ಜಿ, ಜ್ಯೂಸ್ ಇಟ್ಟುಕೊಂಡು ಮಾಡುವುದು ಪಾದಯಾತ್ರೆನಾ ಎಂದು ಪ್ರಶ್ನಿಸಿದ್ದಾರೆ.









