ಸಿರಾಜ್ ಗೆ ಕೊಹ್ಲಿ ಕೊಟ್ಟ ಸರ್ಪ್ರೈರ್ಸ್ ಎಂಥದ್ದು ಗೊತ್ತಾ..? Mohammed-siraj-recalls-kohli-best-surprise saaksha tv
ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಗೆ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ವಿಶೇಷವಾದ ಒಡನಾಟವಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹೈದರಾಬಾದ್ ಬೌಲರ್ ಗೆ ಕೊಹ್ಲಿ ನೀಡಿದ ಪ್ರೋತ್ಸಾಹ ಮತ್ಯಾರು ನೀಡಿಲ್ಲ.
ಕಷ್ಟದ ಸಮಯದಲ್ಲಿ ಕೊಹ್ಲಿ ನನಗೆ ಬೆಂಬಲವಾಗಿ ನಿಂತಿದ್ದರು ಎಂದು ಸಿರಾಜ್ ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
ಐಪಿಎಲ್ ಮೆಗಾ ಹರಾಜು-2022 ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ. ವಿರಾಟ್ ಕೊಹ್ಲಿ ಜೊತೆಗೆ ಸಿರಾಜ್ ಅವರನ್ನು ಉಳಿಸಿಕೊಂಡಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಬಾರಿಯ ಐಪಿಎಲ್ ಗಾಗಿ ಪಾಡ್ಕಾಸ್ಟ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರಲ್ಲಿ ಮಾತನಾಡಿದ ಸಿರಾಜ್, ತಮ್ಮ ಐಪಿಎಲ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ, ವಿರಾಟ್ ಕೊಹ್ಲಿ ಜೊತೆಗಿನ ಹಳೆಯ ಘಟನೆಯನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಒಂದು ದಿನ ಸಿರಾಜ್ ಆರ್ ಸಿಬಿ ಆಟಗಾರರನ್ನ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರಂತೆ. ಹೀಗಾಗಿ ಸಿರಾಜ್ ಹೊಟೆಲ್ ನಿಂದ ನೇರವಾಗಿ ಮನೆಗೆ ತೆರಳಿಸಿದ್ದರಂತೆ.
ಅದಕ್ಕೂ ಮುನ್ನಾ ವಿರಾಟ್ ಕೊಹ್ಲಿ ಅವರನ್ನ ಭೇಟಿಯಾಗಿ ಮನೆ ಬನ್ನಿ ಎಂದು ಆಹ್ವಾನ ನೀಡಿದ್ರರಂತೆ. ಆದ್ರೆ ವಿರಾಟ್ ಕೊಹ್ಲಿ ಬೆನ್ನು ನೋವು ಅಂತ ನೆಪ ಹೇಳಿ ಬರಲು ಸಾಧ್ಯವಿಲ್ಲ ಅಂತ ಸಿರಾಜ್ ಗೆ ಹೇಳಿದ್ದಂತೆ.
ಆಗ ಸಿರಾಜ್, ಸರಿ ನೀವು ರಿಲ್ಯಾಕ್ಸ್ ಮಾಡಿ ಎಂದು ಹೇಳಿ ಅಲ್ಲಿಂದ ಹೊರಟೋಗಿದ್ದರಂತೆ.
ಆ ನಂತರ ಒಬ್ಬೊಬ್ಬರಾಗಿ ಪಾರ್ಥಿವ್ ಪಟೇಲ್ ಮತ್ತು ಚಹಾಲ್ ಸಿರಾಜ್ ಮನೆಗೆ ಬಂದಿದ್ದರಂತೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೂಡ ಕಾರಿನಿಂದ ಇಳಿದ್ರಂತೆ. ಇದನ್ನ ಕಂಡ ಸಿರಾಜ್ ಓಡಿ ಹೋಗಿ ಕೊಹ್ಲಿಯನ್ನ ಅಪ್ಪಿಕೊಂಡರಂತೆ.
ಈ ಘಟನೆಯನ್ನ ನೆನೆಯುತ್ತಾ, ಸಿರಾಜ್ ಭಾವುಕರಾಗಿ ಇದು ನನ್ನ ಜೀವನದಲ್ಲಿ ಅತ್ಯುತ್ತಮ ಸರ್ಪ್ರೈಸ್..! ಕೊಹ್ಲಿ ಭಾಯ್ ಬೆನ್ನುನೋವು ಎಂದು ಎಂದೇಲಿ.. ಮತ್ತೆ ನಮ್ಮ ಮನೆಗೆ ಬಂದಿದ್ದರು..!
ಆಗ ವಿರಾಟ್ ಕೊಹ್ಲಿ ಟಾಲಿ ಚೌಕಿಗೆ ಬಂದಿದ್ದಾರೆಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ.









