PUB G : ಪಬ್ ಜಿ ಆಡಲು ಹೊಸ ಮೊಬೈಲ್ ಕೊಡಿಸದಕ್ಕೆ ಪ್ರಾಣ ಬಿಟ್ಟ ಯುವತಿ
ಪಬ್ ಜೀ…. ಹಲವರಿಗೆ ಈ ಆನ್ ಲೈನ್ ಗೇಮ್ ಒಂದು ಅಡಿಕ್ಷನ್ ಆಗಿಬಿಟ್ಟಿದೆ.. ಎಷ್ಟೋ ಜನರು ಇದೇ ಗೇಮ್ ನ ಅಡಿಕ್ಷನ್ ಗಾಗಿ ತಮ್ಮ ಪ್ರಾಣವನ್ನೂ ಕಳೆದುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ… ಭಾರತದಲ್ಲಿ ಈ ಗೇಮ್ ಬ್ಯಾನ್ ಆಗಿತ್ತು… ಈಗ ಇಂಡಿಯಾ ವರ್ಷನ್ ಬಂದಿದೆ..
ಆದ್ರೆ ಈಗ 18 ವರ್ಷದ ಯುವತಿಯೊಬ್ಬಳು ಪಬ್ ಜಿ ಆಡಲು ತನ್ನ ತಂದೆ ಹೊಸ ಮೊಬೈಲ್ ಕೊಡಿಸಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೈಪುರದ ಸೊಡಲದಲ್ಲಿ ನಡೆದಿದೆ.
ಈ ಸಂಬಂಧ ಜೈಪುರ ಪೊಲೀಸ್ ಆಯುಕ್ತ ರಾಜ್ ಕುಮಾರ್ ಗುಪ್ತಾ ಅವರು ಪ್ರತಿಕ್ರಿಯಿಸಿ, 12ನೇ ತರಗತಿಯ 18 ವರ್ಷದ ಯುವತಿ ಫೆಬ್ರವರಿ 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ.
ತನ್ನ ಬರ್ತ್ ಡೇ ಯಂದು ಪಬ್ ಜಿ ಆಡಲು ತನಗೆ ಹೊಸ ಮೊಬೈಲ್ ಕೊಡಿಸಬೇಕೆಂದು ಪೋಷಕರ ಬಳಿ ಡಿಮ್ಯಾಂಡ್ ಮಾಡಿದ್ದಾಳೆ.. ತಂದೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಹೊಸ ಫೋನ್ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ..
ಆದರೆ ಕೆಲ ದಿನಗಳೇ ಕಳೆದರೂ ತಂದೆ ಹೊಸ ಫೋನ್ ಕೊಡಿಸಿಲ್ಲ.. ಇದರಿಂದ ಮನನೊಂದು ಯುವತಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ.








