ಶಾಸಕ ಜಮೀರ್ ಅಹ್ಮದ್ ಸಹೋದರರ ವಿರುದ್ಧ FIR ದಾಖಲು Saaksha Tv
ಬೆಂಗಳೂರು: ಭೂ ಕಬಳಿಕೆ ಆರೋಪದಡಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ಸಹೋದರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಶಾಸಕ ಜಮೀರ್ ಹಾಗೂ ಸಹೋದರರ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ವರ್ಷ ಶಾಹೀತಾ ನಾಸೀನ್, ತಸ್ನೀಮ್ ಫಾತೀಮಾರಿಂದ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಕೆಯಾಗಿತ್ತು.
ಚೊಕ್ಕನಹಳ್ಳಿ ಬಡಾವಣೆಯ ಸೈಟ್ ನಂ. 5, 6 ರ ವ್ಯಾಜ್ಯ ಸಂಬಂಧ ಜಮೀರ್ ಕುಟುಂಬಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2015 ರಲ್ಲಿ ಶಾಹಿತಾ ನಾಸೀನ್, ತಸೀಮಾ ಫಾತೀಮಾ ಅವರು ಜಮೀರ್ ಕುಟುಂಬಸ್ಥರಿಂದ ಸೈಟ್ ಖರೀದಿಸಿದ್ದರಂತೆ. ಜಮೀರ್ ಸಹೋದರ ಹಾಗೂ ಕುಟುಂಬಸ್ಥರೇ ಮಾರಾಟ ಮಾಡಿದ್ದರು.
ಸೈಟ್ ಖರೀದಿಸಿದ ನಂತರ ಶಾಹೀತಾ ನಾಸೀನ್ ಸೈಟ್‌ಗಳ ಕಡೆ ಗಮನ ಹರಿಸಿರಲಿಲ್ಲ. ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್ ಕುಟುಂಬದಿಂದಲೇ ಸೈಟ್‌ಗಳ ಕಬಳಿಕೆ ಯತ್ನಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಹೀತಾ ನಾಸೀನ್ ಗಂಭೀರ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ. ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಕೋರ್ಟ್ ಆದೇಶಿಸಿದೆ. ಆದರೆ ಕೋರ್ಟ್‌ನಿಂದ ತಡೆಯಾಜ್ಞೆ ಬಂದರೂ ಜಮೀರ್ ಕುಟುಂಬಸ್ಥರು ಸೈಟ್ ಬಿಟ್ಟುಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದೂರುದಾರರಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.









