IPL 2022 | ಐಪಿಎಲ್ ಮಹಾ ಕದನಕ್ಕೆ ಮುಹೂರ್ತ ಫಿಕ್ಸ್..!?
IPL-2022 ಮೆಗಾ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ ವೆಚ್ಚ ಮಾಡಿ ಆಟಗಾರರನ್ನು ಖರೀದಿಸಿವೆ.
ಮತ್ತೊಂದೆಡೆ ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳ ಆಗಮನದಿಂದಾಗಿ ಈ ಬಾರಿಯ ಸೀಸನ್ ಇನ್ನಷ್ಟು ರಸಭರಿತವಾಗಿರಲಿದೆ.
ಹೀಗಾಗಿ IPL-2022 ವೇಳಾಪಟ್ಟಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಮಧ್ಯೆ 2022ರ ಐಪಿಎಲ್ ಸೀಸನ್ ಮಾರ್ಚ್ 27ರಂದು ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಶೀಘ್ರದಲ್ಲಿಯೇ ಈ ವೇಳಪಟ್ಟಿಯನ್ನು ದೃಢಪಡಿಸುವ ಸಾಧ್ಯತೆಗಳಿವೆ.
ಈ ವರ್ಷದ ಎಲ್ಲಾ ಐಪಿಎಲ್ ಪಂದ್ಯಗಳು ಅಹಮದಾಬಾದ್, ಮುಂಬೈ ಮತ್ತು ಪುಣೆಯ 6 ಕ್ರೀಡಾಂಗಣಗಳಲ್ಲಿ ನಡೆಯುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ವಾಂಖೆಡೆ, ಬ್ರಬೋರ್ನ್, ಡಾ ಡಿವೈ ಪಾಟೀಲ್ ಮತ್ತು ರಿಲಯನ್ಸ್ ಜಿಯೋ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ.









