ಅಂದು ಲಾಡ್ರ್ಸ್ ಮೈದಾನದಲ್ಲಿ ಶರ್ಟ್ ಬಿಚ್ಚಿ ಕುಣಿದಾಡಿದ್ರು. ಇಂದು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು, ಮುರಿದು ಬಿದ್ದಿರುವ ಮಾವಿನ ಮರವನ್ನು ಹಗ್ಗದಿಂದ ಎಳೆದಾಡಿದ್ರು. ಹೌದು, ಗಂಗೂಲಿಗೂ ಬಾಲ್ಕನಿಗೂ ಇನ್ನಿಲ್ಲದ ನಂಟು. ನೆನಪು ಇರಲೇಬೇಕು… ಅದು 2002ರ ನ್ಯಾಟ್‍ವೆಸ್ಟ್ ಸರಣಿ.. ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದ್ದಾಗ ನಾಯಕನಾಗಿದ್ದ ಗಂಗೂಲಿ ಟೀ ಶರ್ಟ್ ಬಿಚ್ಚಿ ಕುಣಿದಾಡಿರುವ ದೃಶ್ಯವನ್ನು ಎಂದೆಂದೂ ಮರೆಯೋಕೆ ಆಗಲ್ಲ.
ಆದ್ರೆ ಸನ್ನಿವೇಶ ಸ್ವಲ್ಪ ಈಗ ಬದಲಾಗಿದೆ. ಆಗ ಮುಖದಲ್ಲಿ ಗೆಲುವಿನ ಖುಷಿ ಇತ್ತು. ಈಗ ಸ್ವಲ್ಪ ನೋವಿ ಭಾವನೆ ಇದೆ. ಯಾಕಂದ್ರೆ ಸದ್ಯದ ಸನ್ನಿವೇಶದಲ್ಲಿ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾದಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಅಷ್ಟೇ ಯಾಕೆ ಕೊಲ್ಕತ್ತಾದಲ್ಲಿರುವ ಗಂಗೂಲಿಯವರ ಮನೆಯ ಸುತ್ತಮುತ್ತ ಇರೋ ಸಣ್ಣಪುಟ್ಟ ಮರಗಳು ಕೂಡ ಮುರಿದುಬಿದ್ದಿವೆ. ಅದ್ರಲ್ಲೊಂದು ಹಿತ್ತಲಿನಲ್ಲಿರುವ ಮಾವಿನ ಮರವೂ ಮುರಿದು ಬಿದ್ದಿತ್ತು. ಈ ಮಾವಿನ ಮರವನ್ನು ಗಂಗೂಲಿ ಮನೆಮಂದಿಯೊಂದಿಗೆ ಬಾಲ್ಕನಿಯಿಂದ ಹಗ್ಗದಿಂದ ಎಳೆಯುತ್ತಿರುವ ದೃಶ್ಯದ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕೊಂಡಿದ್ದಾರೆ.
ಇದಕ್ಕೆ ಗಂಗೂಲಿ ಅಭಿಮಾನಿಗಳು ತಮಾಷಯಾಗಿ ನಾನಾ ರೀತಿಯ ಕಮೆಂಟ್‍ಗಳನ್ನು ಹಾಕಿದ್ದಾರೆ. ದಾದಾ ಮತ್ತೊಮ್ಮೆ ಬಾಲ್ಕನಿಯನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಮತ್ತೊಬ್ಬರು ವೀರ್‍ಝಾರಾ ಕಥೆಗಿಂತ ದಾದಾನ ಬಾಲ್ಕನಿ ಕಥೆ ಚೆನ್ನಾಗಿದೆ ಅಂತ ಮೇಸೆಜ್ ಮಾಡಿದ್ದಾರೆ.
ಈ ನಡುವೆ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗಬೇಕು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ. ಗಂಗೂಲಿ ಐಸಿಸಿ ಅಧ್ಯಕ್ಷರಾಗದ್ರೆ ವಿಶ್ವ ಕ್ರಿಕೆಟ್ ಇನ್ನಷ್ಟು ಪ್ರಗತಿಯನ್ನು ಕಾಣಬಹುದು, ಅಲ್ಲದೆ ಗಂಗೂಲಿಗೆ ಯಾವ ರೀತಿ ಆಡಳಿತ ನಡೆಸಬೇಕು, ಕ್ರಿಕೆಟ್ ನ ಗುಣಮಟ್ಟವನ್ನು ಯಾವ ರೀತಿ ಸುಧಾರಣೆ ಮಾಡಬೇಕು ಮತ್ತು ಆಧುನಿಕ ಕ್ರಿಕೆಟ್‍ನ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ.








