ಮೋದಿಗೆ ವಿದೇಶಕ್ಕೆ ಹೊಗಲು ಸಮಯವಿದೆ ರೈತರ ಬಳಿ ಹೊಗಲು ಸಮಯವಿಲ್ಲ – ಪ್ರಿಯಾಂಕಾ ಗಾಂಧಿ.
ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದ ಪ್ರವಾಸದ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯ ನಾಥ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿಗೆ ವಿದೇಶಕ್ಕೆ ಹೋಗಲು ಸಮಯವಿದೆ, ಆದರೆ ರೈತರ ಹತ್ತಿರ ಹೋಗಲು ಸಮಯವಿಲ್ಲ ಎಂದು ಹೇಳಿದ್ದಾರೆ. ನನ್ನ ತಂದೆ ಅಥವಾ ಕುಟುಂಬದ ಸದಸ್ಯರು ಪ್ರಧಾನಿಯಾಗಿದ್ದಾಗ ರೈತರ ಮನೆ ಬಾಗಿಲಿಗೆ ಹೋಗುತ್ತಿದ್ದರು ಎಂದು ಕಾಂಗ್ರೇಸ್ ನಾಯಕಿ ಹೇಳಿದ್ದಾರೆ.
ಭಾನುವಾರ ಉಂಚಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತುಲ್ ಸಿಂಗ್ ಪರ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಪ್ರಿಯಾಂಕ ಮಾತನಾಡಿದರು. ರಾಯ್ ಬರೇಲಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮನೀಶ್ ಚೌಹಾಣ್ ಪರವಾಗಿ ರೋಡ್ ಶೋ ನಡೆಸಿದರು.
ಇಂದಿನ ಪ್ರಧಾನಿಗೆ ಮನೆಯಿಂದ ಹೊರಬರಲು ಅವಕಾಶವಿಲ್ಲ. ವಿದೇಶಕ್ಕೆ ಹೋಗಲು ಸಾಕಷ್ಟು ಸಮಯವಿದೆ. ಸಚಿವರ ಪುತ್ರ ರೈತರ ಮೇಲೆ ಸಾರ್ವಜನಿಕವಾಗಿ ಕಾರು ಹತ್ತಿಸಿದರೂ ಸರ್ಕಾರ ಏನೂ ಮಾಡಲಿಲ್ಲ. ದೇಶದ ಪ್ರಧಾನಿಗೆ ಅಲ್ಲಿಗೆ ಹೋಗುವ ಅವಕಾಶ ಸಿಗಲಿಲ್ಲ. ಎಂದು ಕಿಡಿಕಾರಿದರು.








