ಯುವಕ ಹರ್ಷ ಕೊಲೆ ಪ್ರಕರಣ | ಮಾಜಿ ಸಿಎಂ ಹೆಚ್ ಡಿ ಕೆ | ಸಿದ್ದರಾಮಯ್ಯ ಪ್ರತಿಕ್ರಿಯೆ Saaksha Tv
ಬೆಂಗಳೂರು: ಅಮಾಯಕರ ಬಲಿ ಪಡೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಕೊಲೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದ ಕಾರ್ಯಕರ್ತನ ಉಳಿಸಲಾಗದ ಸರ್ಕಾರ, ರಾಜ್ಯದ ಜನತೆಯನ್ನು ರಕ್ಷಿಸಲು ಸಾಧ್ಯವೇ. ಕೊಲೆಯಾದ ಯುವಕನ ಕುಟುಂಬ ಹೇಳಿದೆ ಆತನ ಕೊಲೆಗೆ ಎರಡು ವರ್ಷದಿಂದ ಸಂಚು ಎಂದಿದ್ದಾರೆ. ಹಾಗಾದರೆ ಸರ್ಕಾರ ಏನು ಮಾಡುತ್ತಿತ್ತು. ನಾನು ಹಲವು ದಿನಗಳ ಹಿಂದೆನೇ ಹೇಳಿದ್ದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳು ಯಾವ ಹಂತಕ್ಕಾದರೂ ಹೋಗಬಹುದು ಎಂದು. ಚುನಾವಣೆಗೆ ವರ್ಷವಿರುವಾಗ ಇಂತಹ ಘಟನೆ ನಡೆದಿದೆ ಅಂದರೆ ಏನು ಅರ್ಥ. ಇಂತಹ ಘಟನೆಗಳು ನಾಂದಿಯಾಗ್ತಾ ಇದೆಯಾ ಎಂಬ ಆತಂಕ ಶುರುವಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಕೊಲೆ ಪ್ರಕರಣದ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರು. ಸರ್ಕಾರ ಜವಾಬ್ದಾರರಲ್ವಾ? ಹೋಮ್ ಮಿನಿಸ್ಟರ್, ಈಶ್ವರಪ್ಪ ಜವಾಬ್ದಾರರಲ್ವಾ ಎಂದು ಪ್ರಶ್ನಿಸಿದ್ದಾರೆ.
ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರೋರು. ಯಾರದ್ದೇ ಕೊಲೆಯಾದರೂ ಕಠಿಣ ಶಿಕ್ಷೆ ಆಗಬೇಕು. ಕೊಲೆ ಖಂಡಿಸ್ತೇವೆ. ಕಾರ್ಯಕರ್ತ ಹರ್ಷ ಅನ್ನೋ ಯುವಕನ ಕೊಲೆಯಾಗಿದೆ. ಕಾರಿನಲ್ಲಿ ಬಂದು ಕೊಲೆ ಮಾಡಲಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಇಂತಹ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಮೊದಲು. ತಪ್ಪಿತಸ್ಥರು ಯಾರು ಅಂತಾ ಮೊದಲು ಪತ್ತೆ ಮಾಡಲಿ. ಕಾಂಗ್ರೆಸ್, SDPI ಅಂತಾ ಹೇಳಬಾರದು. ಯಾರೇ ಆದ್ರೂ ಪತ್ತೆ ಹಚ್ಚಿ ಶಿಕ್ಷೆ ನೀಡಲಿ ಎಂದು ಒತ್ತಾಯಿಸಿದರು.









