Bengaluru Karaga : ಕರಗಕ್ಕೆ ಮತ್ತೊಮ್ಮೆ ಕೊರೊನಾ ಕಂಟಕ : ಸಾರ್ವಜನಿಕರಿಗೆ ಅವಕಾಶ ಸಿಗೋದು ಅನುಮಾನ
ಬೆಂಗಳೂರು : ಬೆಂಗಳೂರು ಕರಗಕ್ಕೆ ಮತ್ತೊಮ್ಮೆ ಕೊರೊನಾ ಕಂಟಕ ಎದುರಾಗಿದೆ.. ಕೋವಿಡ್ ಹಿನ್ನೆಲೆ ಈ ಬಾರಿಯೂ ಸಾರ್ವಜನಿಕರಿಗೆ ಅವಕಾಶ ಸಿಗೋದು ಅನುಮಾನ ಎನ್ನಲಾಗ್ತಿದೆ. ಕರಗ, ಜಾತ್ರೆಗಳಲ್ಲಿ ಜನ ಸೇರೋದು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿರೋದಾಗಿ ತಿಳಿದುಬಂದಿದೆ.
ಮೂರನೇ ಅಲೆ ಇನ್ನು ಮುಗಿಯದ ಹಿನ್ನೆಲೆ, ಜಾತ್ರೆಗಳಿಗೆ ಅವಕಾಶ ಕೊಡೋದು ಸೂಕ್ತವಲ್ಲ ಎಂಬ ಆಲೋಚನೆ ಹೊಂದಿದೆ ಎನ್ನಲಾಗ್ತಿದೆ..
ಇನ್ನೂ ಈಗಾಗಲೇ ಬೆಂಗಳೂರು ಕರಗಕ್ಕೆ ಸಿದ್ಧತೆ ಮಾಡಲಾಗ್ತಿದೆ. BBMPಯೂ ಒಂದುಹಂತದಲ್ಲಿ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಕರಗಕ್ಕೆ ಪೂರ್ಣ ಅನುಮತಿ ಬೇಡ ಎಂದ ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ ಎನ್ನಲಾಗ್ತಿದೆ.
ಈಗಾಗಲೇ ಒಮಿಕ್ರಾನ್ ಕೇಸ್ಗಳು ರಾಜ್ಯದಲ್ಲಿ ಆಕ್ಟೀವ್ ಆಗಿವೆ, ಕೇಸ್ಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಡೆತ್ ರೇಟ್ ಕಡಿಮೆಯಾಗಿಲ್ಲ. ಆರೋಗ್ಯ ಇಲಾಖೆ ಕ್ಲಿನಿಕಲ್ ಎಕ್ಸ್ ಪರ್ಟ್ಸ್ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಸಂಗ್ರಹಿಸುತ್ತಿದೆ.
ಸದ್ಯಕ್ಕಂತೂ ರಿಲ್ಯಾಕ್ಷೇಷನ್ ಕೊಡಲು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದಾರೆ.. ಈಗಾಗಲೇ ಬೆಂಗಳೂರು ಕರಗಕ್ಕೆ ಸಿದ್ಧತೆ ಹಿನ್ನೆಲೆ , ಬೆಂಗಳೂರು ಕರಗಕ್ಕೆ ಪ್ರತ್ಯೇಕ ಗೈಡ್ಲೈನ್ಸ್ ಅನ್ವಯವಾಗಲಿದೆ..
ಕರಗದಲ್ಲಿ ಎಷ್ಟು ಜನರು ಇರಬೇಕು , ಯಾವ ರೀತಿ ಕರಗದಲ್ಲಿ ಮುಂಜಾಗೃತೆ ವಹಿಸಬೇಕು , ಈ ಕುರಿತು ಪ್ರತ್ಯೇಕ ಗೈಡ್ ಲೈನ್ಸ್ಗೆ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ಆರೋಗ್ಯ ಇಲಾಖೆ ವರದಿಯನ್ನು ಸರ್ಕಾರಕ್ಕೆ ನೀಡಲಿದೆ. ತಾಂತ್ರಿಕ ಸಲಹಾ ಸಮಿತಿಯ ನಿರ್ಧಾರದಂತೆ ಗೈಡ್ ಲೈನ್ಸ್ ರೆಡಿಯಾಗಲಿದೆ.