Rohit Sharma | ವಿರಾಟ್ ಕೊಹ್ಲಿಯನ್ನ ಮೀರಿಸಿದ ರೋಹಿತ್
ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಸರಣಿಯನ್ನ ವಶಪಡಿಸಿಕೊಂಡಿದೆ.
ಆ ಮೂರು ಮ್ಯಾಚ್ ಗಳ ಟಿ 20 ಸರಣಿಯನ್ನ ಭಾರತ ಕ್ರಿಕೆಟ್ ತಂಡ ಕ್ಲೀನ್ ಸ್ವೀಪ್ ಮಾಡಿದೆ.
ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ, ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
T20 ಕ್ರಿಕೆಟ್ ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸರಣಿಗಳನ್ನು ವೈಟ್ವಾಶ್ ಮಾಡಿದ ಭಾರತೀಯ ನಾಯಕನಾಗಿ ಹಿಟ್ಮ್ಯಾನ್ ಇತಿಹಾಸ ನಿರ್ಮಿಸಿದ್ದಾರೆ.
2017ರಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಸಾರಥ್ಯದ ಟೀಂ ಇಂಡಿಯಾ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿತ್ತು.
ಅದೇ ರೀತಿ 2018 ರಲ್ಲಿ ವೆಸ್ಟ್ ಇಂಡೀಸ್ ವೈಟ್ ವಾಶ್ ಆಗಿತ್ತು.
ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲೂ ಟೀಂ ಇಂಡಿಯಾ ವೈಟ್ ವಾಶ್ ಮಾಡಿತ್ತು.
ಇದೀಗ ವೆಸ್ ಇಂಡೀಸ್ ವಿರುದ್ಧ ಸರಣಿಯಲ್ಲೂ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ.
ಆ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನ ರೋಹಿತ್ ಶರ್ಮಾ ಮುರಿದಿದ್ದಾರೆ.
ತವರಿನಲ್ಲಿ ಅತಿ ಹೆಚ್ಚು ಟಿ 20 ಪಂದ್ಯಗಳನ್ನ ಗೆದ್ದ ನಾಯಕ ರೋಹಿತ್ ಶರ್ಮಾ ಆಗಿದ್ದಾರೆ.
ರೋಹಿತ್ ನೇತೃತ್ವದ ಟೀಂ ಇಂಡಿಯಾ ತವರು ನೆಲದಲ್ಲಿ 15 ಪಂದ್ಯಗಳನ್ನು ಆಡಿದ್ದು, 14 ಪಂದ್ಯಗಳನ್ನು ಗೆದ್ದಿದೆ. rohit-sharma-rare-captaincy-record









