Virat-Rohit | ವಿರಾಟ್ ಕೈಯಲ್ಲಿ ಆಗಲಿಲ್ಲ ರೋಹಿತ್ ಸಾಧಿಸಿ ತೋರಿಸಿದ
ಈಡನ್ ಗಾರ್ಡನ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ 20 ಪಂದ್ಯ ಗೆಲ್ಲುವ ಮೂಲಕ ಆರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟಿ 20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಂಬರ್ 1 ಸ್ಥಾನಕ್ಕೆ ಏರಿದೆ.
ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ರೋಹಿತ್ ಶರ್ಮಾ, ನಾಯಕನಾಗಿ ವಿರಾಟ್ ಕೊಹ್ಲಿ ಸಾಧಿಸದೇ ಇದ್ದದ್ದನ್ನ ಸಾಧಿಸಿದ್ದಾರೆ.
ರೋಹಿತ್ ಟಿ20ಯಲ್ಲಿ ಭಾರತ ತಂಡವನ್ನು ನಂಬರ್ 1 ಸ್ಥಾನಕ್ಕೇರಿಸಿದ ಎರಡನೇ ನಾಯಕರಾಗಿ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ 2016ರಲ್ಲಿ ಮಹೇಂದ್ರ ಸಿಂಗ್ ಧೋನಿ ಟಿ20ಯಲ್ಲಿ ಭಾರತ ತಂಡವನ್ನು ನಂ.1 ಸ್ಥಾನಕ್ಕೇರಿದ್ದರು.
ಟಿ20ಯಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಂಡ ನಂತರ ರೋಹಿತ್ ಅವರ ಸತತ ಎರಡನೇ ಟಿ20 ಸರಣಿಯನ್ನ ಗೆದ್ದುಕೊಂಡಿದ್ದಾರೆ.
ಅದೇ ರೀತಿ, T20 ಕ್ರಿಕೆಟ್ ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸರಣಿಗಳನ್ನು ವೈಟ್‌ವಾಶ್ ಮಾಡಿದ ಮೊದಲ ಭಾರತೀಯ ನಾಯಕನಾಗಿ ರೋಹಿತ್ ಇತಿಹಾಸ ನಿರ್ಮಿಸಿದ್ದಾರೆ. rohit-sharma-becomes-only-second -captain saaksha tv









