ಪಂಜಾಬ್ ಚುನಾವಣೆಯಲ್ಲಿ ಮತ ಚಲಾಯಿಸಲು ಓಡಿ ಬಂದ 99 ವರ್ಷದ ವ್ಯಕ್ತಿ..(ವೀಡಿಯೋ)
99 ವರ್ಷದ ವ್ಯಕ್ತಿಯೊಬ್ಬರು ಮತ ಚಲಾಯಿಸಲು 19 ವರ್ಷದ ಯುವಕನಂತೆ ಓಡೋಡಿ ಬಂದ ಘಟನೆ ಪಂಜಾಬ್ ನ ಫಿರೋಜ್‌ಪುರ ಮತಗಟ್ಟೆಯಲ್ಲಿ ನಡೆದಿದೆ.
https://twitter.com/i/status/1495424725379854338
ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಜಗತಾರ್ ಸಿಂಗ್ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “19 ವರ್ಷ ವಯಸ್ಸಿನರಿಗೆ ಪೈಪೊಟಿ ನೀಡುವಂತೆ 99 ವರ್ಷದ ನಾಗರಿಕ, ಫಿರೋಜ್‌ಪುರದ ಷ. ಜಗತಾರ್ ಸಿಂಗ್ ಮತ ಚಲಾಯಿಸಲು ಓಡಿ ಬಂದರು ಎಂದು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಪಂಜಾಬ್ ತನ್ನ 117 ಸದಸ್ಯರ ಶಾಸಕಾಂಗ ಸಭೆಗೆ ಶಾಸಕರನ್ನು ಆಯ್ಕೆ ಮಾಡಲು ಭಾನುವಾರ ಮತ ಚಲಾಯಿಸಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ 2017 ರಲ್ಲಿ ಶೇಕಡಾ 77.36 ಕ್ಕೆ ಹೋಲಿಸಿದರೆ ರಾಜ್ಯದಲ್ಲಿ 65.32 ರಷ್ಟು ಮತದಾನವಾಗಿದೆ. Punjab Election – 99-yr-old runs his way to cast vote in Punjab polls








