Surya kumar yadav | ಸೂರ್ಯ 360 ಡಿಗ್ರಿ ಆಟಗಾರ : ಪೋಲಾರ್ಡ್
ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಇತರ ಆಟಗಾರರಿಗೆ ಹೋಲಿಸಿದರೆ ಎಂಟ್ರಿ ಕೊಂಚ ನಿಧಾನವಾದರೂ ಅವಕಾಶ ಸಿಕ್ಕಾಗಲೆಲ್ಲ ತಮ್ಮ ತಾಕತ್ತು ಸಾಬೀತು ಪಡಿಸುತ್ತಲೇ ಇದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಸೂರ್ಯ, ಮೂರು ಪಂದ್ಯಗಳಲ್ಲಿ ಒಟ್ಟು 107 ರನ್ ಗಳಿಸಿದರು. ಸರಾಸರಿ 53.50. ಸ್ಟ್ರೈಕ್ ರೇಟ್ 194.55 ನೊಂದಿಗೆ ಬ್ಯಾಟ್ ಬೀಸಿದ್ದಾರೆ. ಅದರಲ್ಲೂ ಅಂತಿಮ ಮೂರನೇ ಪಂದ್ಯದಲ್ಲಿ 31 ಎಸೆತಗಳಲ್ಲಿ 65 ರನ್ ಗಳಿಸಿದ್ದಾರೆ.
ವಿಂಡೀಸ್ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಅವರ ಪ್ರದರ್ಶನಕ್ಕೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ.

ವೆಸ್ಟ್ ಇಂಡೀಸ್ ನಾಯಕ ಮತ್ತು ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್ ಕೂಡ ಸೂರ್ಯ ಅವರನ್ನು ಹೊಗಳಿದ್ದಾರೆ.
ಭಾನುವಾರ ನಡೆದ ವರ್ಚುವಲ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಪೊಲಾರ್ಡ್, ”ಸೂರ್ಯ ವಿಶ್ವ ದರ್ಜೆಯ ಆಟಗಾರ. 2011 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರೊಂದಿಗೆ ಆಡುತ್ತಿದ್ದೇನೆ.
ಕ್ರಿಕೆಟಿಗನಾಗಿ ಅವರ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ವೈಯಕ್ತಿಕವಾಗಿ… ಟೀಂ ಇಂಡಿಯಾ ಯಶಸ್ಸಿಗಾಗಿ ಅವರು ಮಾಡುತ್ತಿರುವ ಕೆಲಸ ಮತ್ತು ಆಡುತ್ತಿರುವ ರೀತಿ ಅದ್ಭುತವಾಗಿದೆ
ಅವರು 360 ಡಿಗ್ರಿ ಆಟಗಾರ. ಪ್ರತಿಯೊಬ್ಬ ಬ್ಯಾಟರ್ ಅವರಿಂದ ಕಲಿಯಬೇಕು. ನಾವು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದಿದ್ದಾರೆ. suryakumar-yadav-world-class-player








