ರಷ್ಯಾ ಬೆಂಬಲಿತ ಪ್ರದೇಶಗಳ ಮೇಲೆ ನಿರ್ಬಂಧ ವಿಧಿಸಿದ ಅಮೇರಿಕ Saaksha Tv
ಅಮೆರಿಕ: ರಷ್ಯಾ ಬೆಂಬಲಿತ ಎರಡು ಪ್ರದೇಶಗಳ ಮೇಲೆ ಕೆಲವು ನಿರ್ಬಂಧಗಳನ್ನು ಅಮೇರಿಕ ವಿಧಿಸಿದ್ದು, ಇದು ಯುದ್ಧದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಉಕ್ರೇನ್ ಪೂರ್ವ ಭಾಗದಲ್ಲಿರುವ, ರಷ್ಯಾ ಪರ ಒಲವು ಹೊಂದಿರುವ, ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಅಮೆರಿಕ ಖಂಡಿಸಿದ್ದು, ರಷ್ಯಾ ಬೆಂಬಲಿತ ಎರಡು ಪ್ರದೇಶಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.
ಉಕ್ರೇನ್ ಪ್ರತ್ಯೇಕತಾವಾದಿಗಳ ಪರವಾಗಿ ರಷ್ಯಾ ತೆಗೆದುಕೊಂಡ ನಿರ್ಧಾರದಿಂದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.
ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ, ಉಕ್ರೇನ್ನಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದಾಗಿ ಹೇಳಿಕೊಂಡ ಬಳಿಕ ಅಮೆರಿಕ, ರಷ್ಯಾ ಬೆಂಬಲಿತ ಉಕ್ರೇನ್ ಪ್ರದೇಶಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಅದು ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ವಿಚಾರದಲ್ಲಿ ನಿರ್ಬಂಧ ವಿಧಿಸಲಾಗುತ್ತದೆ. ಈ ಬೆನ್ನಲ್ಲೇ ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು ಕೂಡ ನಿರ್ಬಂಧಗಳನ್ನು ರಷ್ಯಾ ವಿರುದ್ಧ ವಿಧಿಸುವುದಾಗಿ ಹೇಳಿದ್ದಾರೆ.








