ಭಾರತ vs ಶ್ರೀಲಂಕಾ ಸೀರೀಸ್ | ಶ್ರೀಲಂಕಾ ಆಟಗಾರರ ಪಟ್ಟಿ ಪ್ರಕಟ Saaksha Tv
ನವದೆಹಲಿ: ಭಾರತದ ವಿರುದ್ಧ ಮುಂಬರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಗೆ ಶ್ರೀಲಂಕಾ ತನ್ನ ತಂಡವನ್ನು ಪ್ರಕಟಿಸಿದೆ.
ಫೆಬ್ರವರಿ 24 ರಂದು ಲಖನೌದಲ್ಲಿ ಮೊದಲನೇ ಟಿ20 ಪಂದ್ಯ ನಡೆಯಲಿದೆ. ಫೆ. 26 ಮತ್ತು 27 ರಂದು ಧರ್ಮಶಾಲಾದಲ್ಲಿ ಕೊನೆಯ ಎರಡು ಪಂದ್ಯಗಳು ಜರುಗಲಿವೆ. ಇದಾದ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಮೊದಲನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 12 ರಿಂದ ಶುರುವಾಗಲಿದೆ. ಬಹುಶಃ ಬೆಂಗಳೂರಿನಲ್ಲಿ ನಡೆಯುವ ಎರಡನೇ ಪಂದ್ಯ ಪಿಂಕ್ ಬಾಲ್ ಆಗುವ ಸಾಧ್ಯತೆ ಇದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಳೆದ ಎರಡು ದಿನಗಳ ಹಿಂದೆ ಭಾರತ ತಂಡವನ್ನು ಪ್ರಕಟಿಸಿತ್ತು. ಈಗ ಶ್ರೀಲಂಕಾ ಕ್ರಿಕೆಟ್ ಸೆಲೆಕ್ಷನ್ ಕಮಿಟಿ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ.
ಭಾರತ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ: ದಸೂನ್ ಶನಕ(ನಾಯಕ), ಪಥುಮ್ ನಿಸಾಂಕ, ಕುಸಾಲ್ ಮೆಂಡಿಸ್, ಚರಿತಾ ಅಸಲಂಕಾ(ಉಪ ನಾಯಕ), ದಿನೆಶ್ ಚಂಡಿಮಾಲ್, ದನುಷ್ಕ ಗುಣತಿಲಕೆ, ಕಮಿಲ್ ಮಿಶ್ರಾ, ಜನಿಥ್ ಲಿಯಾಂಗೆ, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ದುಷ್ಮಾಂತ ಚಮೀರ, ಲಹಿರು ಕುಮಾರ, ಬಿನುರಾ ಫೆರ್ನಾಂಡೊ, ಶಿರನ್ ಫೆರ್ನಾಂಡೊ, ಮಹೀಶ ತೀಕ್ಷಣ, ಜೆಫ್ರೆ ವ್ಯಾಂಡೆರ್ಸೆ, ಪ್ರವೀಣ್ ಜಯವಿಕ್ರಮ.









