2022 ಬಿಗ್ ಬಜೆಟ್ ಚಿತ್ರಗಳು, ಪೊನ್ನಿಯಿನ್ ಸೆಲ್ವನ್ ನಿಂದ ಆದಿಪುರುಷ್ ವರೆಗೆ ಫುಲ್ ಲೀಸ್ಟ್
2022 ರಲ್ಲಿ, ಅನೇಕ ಬಿಗ್ ಬಜೆಟ್ ಚಿತ್ರಗಳು ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿವೆ. ಒಂದೊಂದು ಚಿತ್ರಗಳ ಬಜೆಟ್ 300 ಕೋಟಿಗೂ ಹೆಚ್ಚಿದೆ. ಈ ವರ್ಷ ಬಿಡುಗಡೆಯಾಗಲಿರುವ ಅತಿ ಹೆಚ್ಚು ಬಜೆಟ್ ಸಿನಿಮಾಗಳು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ.
ಪೊನ್ನಿಯಿನ್ ಸೆಲ್ವನ್
ಮಣಿರತ್ನಂ ನಿರ್ದೇಶಿಸಿದ ಈ ತಮಿಳು ಚಿತ್ರವು ಈ ವರ್ಷದ ಅತಿ ಹೆಚ್ಚು ಬಜೆಟ್‌ನಲ್ಲಿ ಬಿಡುಗಡೆಯಾಗಲಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ನಿರ್ಮಾಣದ ಈ ಚಿತ್ರದ ಬಜೆಟ್ ಬರೊಬ್ಬರಿ 500 ಕೋಟಿ. ಈ ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಕಾರ್ತಿ, ಜಯಂ ರವಿ, ತ್ರಿಷಾ, ಜೈರಾಮ್, ಶೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ ಮತ್ತು ವಿಕ್ರಮ್ ಪ್ರಭು ಮುಂತಾದ ಅನೇಕ ದೊಡ್ಡ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಈ ಚಿತ್ರವು 1955 ರಲ್ಲಿ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಪೊನ್ನಿಯಿನ್ ಸೆಲ್ವನ್ ಅನ್ನು ಆಧರಿಸಿದೆ. ಇದು ಚೋಳ ರಾಜನ ಕಥೆ ಆಧರಿಸಿದ ಐತಿಹಾಸಿಕ-ಕಾಲ್ಪನಿಕ ಚಲನಚಿತ್ರವಾಗಿದೆ.
ಆದಿಪುರುಷ್
ರಾಮಾಯಣ ಆಧಾರಿತ ಆದಿಪುರುಷ್ ಚಿತ್ರದ ಬಜೆಟ್ 500 ಕೋಟಿ. ಇದು T-Series ಮತ್ತು Retrophiles ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ 3D ಚಲನಚಿತ್ರವಾಗಿದೆ. ಇದನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಈ ಸಿನಿಮಾಗಾಗಿ ಹಾಲಿವುಡ್ ತಂತ್ರಜ್ಞರನ್ನು VFX ಗಾಗಿ ನೇಮಿಸಲಾಗಿದೆ. ‘ಆದಿಪುರುಷ’ ಹಿಂದಿ ಮತ್ತು ತೆಲುಗು ಜೊತೆಗೆ ತಮಿಳು, ಮಲಯಾಳಂ ಮತ್ತು ಕನ್ನಡಕ್ಕೆ ಡಬ್ ಆಗಿ ಬರಲಿದೆ.
RRR
‘RRR’ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿದ್ದರೆ, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. SS ರಾಜಮೌಳಿ ನಿರ್ದೇಶನದ ಈ ಚಿತ್ರ 400 ಕೋಟಿ ವೆಚ್ಚದಲ್ಲಿ ತಯಾರಾಗಿದೆ. ಚಿತ್ರವು 25 ಮಾರ್ಚ್ 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಾಧೇಶ್ಯಾಮ್
350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಜ್ ವಿಶ್ವಕರ್ಮ ಮತ್ತು ರಿದ್ಧಿ ಕುಮಾರ್ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರವು 1970 ರ ಯುರೋಪ್ನಲ್ಲಿ ನಡೆದ ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗಿದೆ. ಇದರೊಂದಿಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ‘ರಾಧೆ ಶ್ಯಾಮ್’ ಮಾರ್ಚ್ 11, 2022 ರಂದು ಬಿಡುಗಡೆಯಾಗಲಿದೆ.
ಪೃಥ್ವಿರಾಜ್
ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಪೃಥ್ವಿರಾಜ್ ಚೌಹಾಣ್ ಜೀವನಾಧಾರಿತ ಈ ಚಿತ್ರದ ಬಜೆಟ್ 300 ಕೋಟಿ. ಚಿತ್ರದಲ್ಲಿ ಪೃಥ್ವಿರಾಜ್ ಚೌಹಾಣ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಮಾನುಷಿ ಛಿಲ್ಲರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರವು 10 ಜೂನ್ 2022 ರಂದು ಬಿಡುಗಡೆಯಾಗಲಿದೆ. ಸಂಜಯ್ ದತ್, ಸೋನು ಸೂದ್, ಅಶುತೋಷ್ ರಾಣಾ ಮತ್ತು ಸಾಕ್ಷಿ ತನ್ವರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬ್ರಹ್ಮಾಸ್ತ್ರ
ಅಯಾನ್ ಮುಖರ್ಜಿ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ 300 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಚಿತ್ರದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ಅಮಿತಾಬ್ ಬಚ್ಚನ್ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದಾರೆ. ಚಿತ್ರವು 11 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಈ ಚಿತ್ರದ ಹೆಸರನ್ನು ಮೊದಲು ಡ್ರ್ಯಾಗನ್ ಎಂದು ಇಡಲಾಗಿತ್ತು, ಆದರೆ ನಂತರ ‘ಬ್ರಹ್ಮಾಸ್ತ್ರ’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಯಿತು