chakravarthy sulibele |ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು…chakravarthy-sulibele-reaction on shivamogga murder case saaksha tv
ಶಿವಮೊಗ್ಗ : ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು, ಇನ್ನೂ ಹಿಂದೂಗಳ ಸಮಾಧಿಗೆ ಕಾರಣವಾಗುತ್ತಿದ್ದಾರೆ ಅಂದ್ರೆ ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗಗೆ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಹಿಜಬ್ ವಿರುದ್ಧ ಗಲಾಟೆ ಮಾಡುತ್ತಿದ್ದ ಇದಕ್ಕಾಗಿ ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಆದ್ರೆ ಇದರ ಹಿಂದಿನ ಸತ್ಯವನ್ನ ಬಯಲಿಗೆ ಎಳೆಯಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಬೇಕು. ಇಲ್ಲದಿದ್ದರೇ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂದು ಆತಂಕ ಹೊರಹಾಕಿದರು.
ಇನ್ನು ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು, ಇನ್ನೂ ಹಿಂದೂಗಳ ಸಮಾಧಿಗೆ ಕಾರಣವಾಗುತ್ತಿದ್ದಾರೆ, ಇದನ್ನ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಭಾರತದಲ್ಲಿ ವಾಹಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. 2% ಇದ್ದದ್ದು, 25% ಆಗಿದೆ ಎಂದು ಮುಸಲ್ಮಾನರೇ ಹೇಳುತ್ತಿದ್ದಾರೆ.
ಇದು ಬಹಳ ಅಪಾಯಕಾರಿ ಸಂಗತಿ. ಮುಂದೆ ಇದರಿಂದ ಧಂಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.









