T20 WC 2022 | ಹಾರ್ದಿಕ್ ಪಾಂಡ್ಯ ಕಥೆ ಮುಗೀತು.. ಅಯ್ಯರ್ ಬೆಸ್ಟ್
ವಿಂಡೀಸ್ ವಿರುದ್ಧದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಮೇಲೆ ಟೀಂ ಇಂಡಿಯಾದ ಮಾಜಿ ಆಟಗಾರರ ವಾಸೀಂ ಜಾಫರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದ್ರೆ ವೆಂಕಟೇಶ್ ಅಯ್ಯರ್ ಉತ್ತಮ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅವರು ಮುಂದಿನ ಟಿ 20 ವಿಶ್ವಕಪ್ ತಂಡದಲ್ಲಿ ಖಂಡಿತವಾಗಿಯೂ ಸ್ಥಾನಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡಿಸ್ ವಿರುದ್ಧದ ಸರಣಿಯಲ್ಲಿ ವೆಂಕಟೇಶ್ ಅಯ್ಯರ್, ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿದ್ದರು.
ಮೂರು ಪಂದ್ಯಗಳಲ್ಲಿ ವೆಂಕಟೇಶ್ ಅಯ್ಯರ್, ಒಟ್ಟು 92 ರನ್ ಗಳಿಸಿ, 2 ಪ್ರಮುಖ ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಾಸೀಂ ಜಾಫರ್ ವೆಂಕಟೇಶ್ ಅಯ್ಯರ್ ಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಯ್ಯರ್ ಅವರನ್ನ ನಾವು ಆರಂಭಿಕರಾಗಿ ನೋಡಿದ್ದೀವಿ.
ಆದರೆ ಅವರು ಅಸಾಧಾರಣವಾಗಿ ಆರನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರುವುದನ್ನು ನೋಡಿ ನನಗೆ ಆಘಾತವಾಯಿತು.
ಆದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲೇ ಇದ್ದರೂ ಆಡುವ ರೀತಿ ಬದಲಾಗಿಲ್ಲ. ಪ್ರಸ್ತುತ ಪಾರ್ಮ್ ನೋಡಿದ್ರೆ ಹಾರ್ದಿಕ್ ಪಾಂಡ್ಯಗಿಂತ ವೆಂಕಟೇಶ್ ಅಯ್ಯರ್ ಮುಂದಿದ್ದಾರೆ.
ಮುಂದಿನ ವಿಶ್ವಕಪ್ ನಲ್ಲಿ ಅಯ್ಯರ್ ಗೆ ಚಾನ್ಸ್ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಸೂಕ್ತ ವ್ಯಕ್ತಿ.
ಮುಂಬರುವ ಐಸಿಸಿ ಮೆಗಾ ಈವೆಂಟ್‌ಗಳಿಗೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಪಾಂಡ್ಯಗಿಂತ ಒಂದು ಹೆಜ್ಜೆ ಮುಂದೆ ಅಯ್ಯರ್ ಇರುತ್ತಾರೆ ಎಂದಿದ್ದಾರೆ ಜಾಫರ್.









