ಬಾಲಕನ ಜೀವ ಉಳಿಸಲು 31 ಲಕ್ಷ ದೇಣಿಗೆ ನೀಡಿದ ಕೆ. ಎಲ್ ರಾಹುಲ್ Saaksha Tv
ಮುಂಬೈ: 11 ವರ್ಷದ ಬಾಲಕನ ಜೀವ ಉಳಿಸಲು ಭಾರತ ತಂಡದ ಆರಂಭಿಕ ಬ್ಯಾಟರ್, ಕನ್ನಡಿಗ ಕೆ. ಎಲ್. 31 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
11 ವರ್ಷದ ಬಾಲಕನ ಹೆಸರು ವರದ್ ನಲ್ವಾಡೆ. ಬಾಲಕ blood disorder ಕಾಯಿಲೆಯಿಂದ ಬಳಲುತ್ತಿದ್ದ. ಈ ಕಾರಣದಿಂದದಾಗಿ ನಲ್ವಾಡೆ ಗೆ ತುರ್ತಾಗಿ ಅಸ್ಥಿ ಮಜ್ಜೆಯ ಕಸಿ ಮಾಡಬೇಕಾಗಿತ್ತು. ಇದಕ್ಕಾಗಿ ಇನ್ಸುರೆನ್ಸ್ ಏಜೆಂಟ್ ಆಗಿರುವ ಮಗುವಿನ ತಂದೆ ಸಚಿನ್ ಮತ್ತು ತಾಯಿ ಸ್ವಪ್ನ ಝಾ ಚಿಕಿತ್ಸೆಗಾಗಿ 35 ಲಕ್ಷರೂ ದೇಣಿಗೆ ಸಂಗ್ರಹಿಸಲು ಎನ್ಜಿಒ ಮೂಲಕ ಅಭಿಯಾನ ಆರಂಭಿಸಿದ್ದರು.
ಈ ವಿಷಯವನ್ನು ತಿಳಿದ ಕೆಎಲ್ ರಾಹುಲ್ ತಂಡ ದೇಣಿಗೆ ಸಂಗ್ರಹಿಸುತ್ತಿದ್ದ ಸಂಸ್ಥೆಯ ಜೊತೆಗೆ ಮಾತನಾಡಿ ಆ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
https://twitter.com/GiveIndia/status/1496095821926137868?ref_src=twsrc%5Etfw%7Ctwcamp%5Etweetembed%7Ctwterm%5E1496095821926137868%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fsports%2Fcricket%2Fkl-rahul-donates-rs-31-lakh-for-budding-cricketers-treatment%2Fka20220222210824802
ಐದನೇ ತರಗತಿಯ ಶಾಲಾ ಬಾಲಕ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ರಕ್ತದ ಕಾಯಿಲೆ ಪತ್ತೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಹೆಮಟಾಲಜಿಸ್ಟ್‌ಗಳ ಆರೈಕೆಯಲ್ಲಿದ್ದಾರೆ.
ಸರ್ಜರಿ ಯಶಸ್ವಿಯಾಗಿದ್ದಕ್ಕೆ ರಾಹುಲ್ ಸಂತಸ
“ವರದ್ ಪರಿಸ್ಥಿತಿ ಬಗ್ಗೆ ನನಗೆ ತಿಳಿದ ನಂತರ, ನನ್ನ ತಂಡ ಗಿವ್ ಇಂಡಿಯಾ ಸಂಸ್ಥೆಯ ಸಂಪರ್ಕಿಸಿತು. ಹಾಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲು ಸಾಧ್ಯವಾಯಿತು. ಆತನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.
ವರದ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು, ಅವನ ಕನಸುಗಳನ್ನು ಈಡೇರಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇವೆ. ನನ್ನ ಈ ಕೊಡುಗೆ ಹೆಚ್ಚೆಚ್ಚು ಜನರು ಅಗತ್ಯ ಇರುವವರಿಗೆ ಸಹಾಯ ಮಾಡಲು ಮುಂದೆ ಬರಲು ಪ್ರೇರೇಪಿಸುತ್ತದೆ ಎಂಬ ಭರವಸೆಯಿದೆ” ಎಂದು ರಾಹುಲ್ ಪಿಟಿಐಗೆ ತಿಳಿಸಿದ್ದಾರೆ.








