Bengaluru : ತೈವಾನ್ ಗೆ ರಕ್ತ ಚಂದನ ರಪ್ತು ಮಾಡಲು ಯತ್ನ ಮೂವರ ಬಂಧನ
ಬೆಂಗಳೂರು : ಬೆಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ವೇಳೆ ತೈವಾನ್ ಗೆ ರಕ್ತ ಚಂದನ ರಪ್ತು ಮಾಡಲು ಯತ್ನಿಸಿದ ಮೂವರನ್ನ ಬಂಧಿಸಿದ್ದಾರೆ..
ಒಟ್ಟು 2.4 ಕೋಟಿ ಮೌಲ್ಯದ 4.82 ಟನ್ ರಕ್ತಚಂದನವನ್ನ ವಶಕ್ಕೆ ಪಡೆಯಲಾಗಿದೆ.
ಪ್ಲೈವುಡ್ ಬಾಕ್ಸ್ ನಲ್ಲಿ ರಕ್ತಚಂದನ ತುಂಡುಗಳನ್ನ ಇಟ್ಟು ರವಾನೆಗೆ ಯತ್ನ ಮಾಡಲಾಗಿದ್ದು,
ತೈವಾನ್ ಗೆ ರಫ್ತು ಮಾಡಲು ಯತ್ನಿಸುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ..
ವೈಟ್ ಫೀಲ್ಡ್ ರೈಲ್ವೆ ಗೂಡ್ಸ್ ಗೋಡಾನ್ ನ ಕಂಟೈನರ್ ನಲ್ಲಿದ್ದ ಪ್ಲೈವುಡ್ ಬಾಕ್ಸ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಂಟೈನರ್ ಓಪನ್ ಮಾಡಿದಾಗ ಜಾಲ ಬೆಳಕಿಗೆ ಬಂದಿದೆ..








