Bengaluru : ಜ್ಯುವೆಲ್ಲರಿ ಶಾಪ್ ಗೆ ದರೋಡೆ – ಐವರ ಬಂಧನ
ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ದರೋಡೆ ಮಾಡಿದ ಗ್ಯಾಂಗ್ ನ ಐವರನ್ನ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.
2021 ಮೇ ನಲ್ಲಿ ಚಿಕ್ಕಪೇಟೆಯ ಜ್ಯುವೆಲರಿ ಶಾಪ್ ಗೆ ನುಗ್ಗಿದ ಗ್ಯಾಂಗ್ ,
ಕೆಲಸ ಮುಗಿಸಿ ಮಲಗಿದ್ದ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿ ಸಿಬ್ಬಂದಿ ಬಳಿಯಿದ್ದ ಚಿನ್ನದ ಆಭರಣ, ಶಾಪ್ ನಲ್ಲಿದ್ದ ಒಂದು ಕೆಜಿ ಬೆಳ್ಳಿ ವಸ್ತು ದರೋಡೆ ಮಾಡಿ ಪರಾರಿಯಾಗಿದ್ದರು..
ಬೆಳಗಿನ ಜಾವ 3.30 ಕ್ಕೆ ಅಂಗಡಿಗೆ ನುಗ್ಗಿದ್ದ ಕಳ್ಳರ ಗುಂಪು ಈ ಕೃತ್ಯವೆಸಗಿತ್ತು..
ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಸಿಟಿ ಮಾರ್ಕೆಟ್ ಪೊಲೀಸರು ಬಂಧಿತರಿಂದ 3.77 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಮೊಹಮ್ಮದ್ ಫರ್ಹಾನ್, ನದೀಮ್ ಪಾಷ, ನಯಾಜ್ ಪಾಷ, ಸಲ್ಮಾನ್ ಪಾಷ ಬಂಧಿತರಾಗಿದ್ದಾರೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








