Ajit agarkar | ಟೀಂ ಇಂಡಿಯಾಗೆ ಅಗರ್ಕರ್ ಬೌಲಿಂಗ್ ಕೋಚ್
ಮುಂದಿನ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶೀಘ್ರದಲ್ಲಿಯೇ ಹೊಸ ಬೌಲಿಂಗ್ ಬರುವ ಸಾಧ್ಯತೆಗಳಿವೆ.
ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಭಾರತ ಕ್ರಿಕೆಟ್ ತಂಡ ಮುಂದಿನ ಬೌಲಿಂಗ್ ಆಗುವ ಸಾಧ್ಯತೆಗಳಿವೆ.
ಟೀಂ ಇಂಡಿಯಾ ಬೌಲಿಂಗ್ ಹುದ್ದೆಗೆ ಅಜಿತ್ ಅವರ ಹೆಸರನ್ನ ಟೀಂ ಇಂಡಿಯಾದ ಸದಸ್ಯರೊಬ್ಬರು ಬಿಸಿಸಿಐಗೆ ಪ್ರತಿಪಾದಿಸಿದ್ದಾರಂತೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಲೇಖನ ಪ್ರಕಟಿಸಿದೆ.

44 ವರ್ಷದ ಅಜಿತ್ ಅಗರ್ಕರ್, ಪ್ರಸ್ತುತ ಟಿವಿ ನಿರೂಪಕರಾಗಿದ್ದಾರೆ. ಈ ಹಿಂದೆ ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆಗೆ ಸ್ಪರ್ಧಿಸಿದ್ದರು.
ಆದ್ರೆ ಚೇತನ್ ಶರ್ಮಾ ಗೆ ಆ ಸ್ಥಾನ ಲಭಿಸಿತ್ತು. 1998 ರಿಂದ 2007 ರವರೆಗೆ ಭಾರತವನ್ನು ಪ್ರತಿನಿಧಿಸಿದ್ದ ಅಗರ್ಕರ್ 28 ಟೆಸ್ಟ್, 191 ODI ಮತ್ತು 4 T20I ಪಂದ್ಯಗಳನ್ನು ಆಡಿದ್ದಾರೆ.
ಅವರು ಭಾರತದ ಪರ ಒಟ್ಟಾರೆ 349 ವಿಕೆಟ್ಗಳನ್ನು ಪಡೆದಿದ್ದಾರೆ.
ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಅನ್ನು ಪ್ರತಿನಿಧಿಸಿದ್ದರು.
42 ಪಂದ್ಯಗಳನ್ನು ಆಡಿರುವ ಅವರು 29 ವಿಕೆಟ್ ಪಡೆದಿದ್ದಾರೆ.








