Virat kohli | ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ಸ್ ಗೆ ಅಪರೂಪದ ಗೌರವ..
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ಸ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಟ್ವಿಟ್ಟರ್ ಶ್ರೇಷ್ಠ ಕ್ರಿಕೆಟಿಗರೆಂದು ಗುರುತಿಸಿ ಅಪರೂಪದ ಗೌರವ ನೀಡಿದೆ.
Twitter ನಲ್ಲಿ ಇವರ ಹೆಸರುಗಳಿರುವ ಹ್ಯಾಶ್ಟ್ಯಾಗ್ಗಳಿಗೆ GOAT (Great Of All Time) ಎಮೋಜಿಯನ್ನು ಸೇರಿಸಿ ಗೌರವಿಸಿದೆ.
ಇವರೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಕೂಡ ದಿಗ್ಗಜ ಆಟಗಾರರಾಗಿ ಗುರುತಿಸಿದೆ.
ಹೀಗಾಗಿ ಇನ್ಮುಂದೆ ಕೊಹ್ಲಿ, ರೋಹಿತ್, ಧೋನಿ ಮತ್ತು ನಡಾಲ್ ಅವರ ಹ್ಯಾಶ್ಟ್ಯಾಗ್ಗಳುಟ್ವಿಟರ್ನಲ್ಲಿ GOAT ಎಮೋಜಿಯೊಂದಿಗೆ ಕಾಣಿಸಿತ್ತದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಸ್ಪ್ಯಾನಿಷ್ ಬುಲ್ ರಾಫೆಲ್ ನಡಾಲ್ ಈಗಿನ ಶ್ರೇಷ್ಠ ಟೆನ್ನಿಸ್ ಆಟಗಾರರಾಗಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ 2022ನಲ್ಲಿ ನಡಾಲ್ ಪ್ರಶಸ್ತಿಯನ್ನು ಗೆದ್ದರು, ಟೆನಿಸ್ ಇತಿಹಾಸದಲ್ಲಿ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ (21) ಪ್ರಶಸ್ತಿ ವಿಜೇತರಾಗಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
virat-kohli-ms-dhoni-rohit-sharma-get-goat-icon saaksha tv









