ದೇಶದಲ್ಲಿ ಏರಿಕೆಯಾದ ಚಿನ್ನದ ಬೆಲೆ – Saaksha Tv
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಬೆನ್ನಲ್ಲೇ ದೇಶದಲ್ಲಿ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. – Saaksha Tv
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ್ದು, ಚಿನ್ನದ ಮಾರುಕಟ್ಟೆ ಮೇಲೆ ಭಾರಿ ಪ್ರಭಾವ ಬೀರಿದೆ. 10 ಗ್ರಾಂ ಚಿನ್ನದ ದರದಲ್ಲಿ ಏಕಾಏಕಿ 850 ರೂ ಹೆಚ್ಚಳವಾಗಿದೆ. ಇದು 13 ತಿಂಗಳ ಗರಿಷ್ಠ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಪೇಟೆಯಲ್ಲಿ ಪ್ರತೀ10 ಗ್ರಾಂ ಚಿನ್ನ ಕನಿಷ್ಟ 850ರೂ ನಿಂದ 1400 ರೂಪಾಯಿ ಹೆಚ್ಚಳ ಕಂಡು 51,750 ಗರಿಷ್ಠ ಮಟ್ಟ ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1925 ಡಾಲರ್ನಷ್ಟಿದ್ದ ಚಿನ್ನವು 1950 ಡಾಲರ್ಗೆ ತಲುಪಿದೆ. ಮುಂದೆ ಇದು 2000 ಡಾಲರ್ವರೆಗೂ ಹೆಚ್ಚುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಜಾಗತಿಕ ಹಣದುಬ್ಬರದ ಆತಂಕ ಉಂಟಾಗಿದೆ. ಪೆಟ್ರೋಲ್ ಕಚ್ಚಾತೈಲದ ಬೆಲೆ ಈಗಾಗಲೇ ಪ್ರತಿ ಬ್ಯಾರಲ್ ಗೆ 100 ಡಾಲರ್ ಏರಿಕೆಯಾಗಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಲು ಕಾರಣವಾಗಲಿದೆ. ತೈಲ ದರ, ಚಿನ್ನದ ಬೆಲೆ ಏರಿಕೆ ಮಧ್ಯೆ ಡಾಲರ್ ಎದುರು ರೂಪಾಯಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ರೂಪಾಯಿ ಬೆಲೆ ಸ್ಥಿರವಾಗಿದೆ ಎಂದು ಹೇಳಲಾಗಿದೆ.









