ಗಾಂಧಿನಗರ : ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಕೊರೊನಾಸುರನ ವಿರುದ್ಧ ಭಾರತ ದಿಟ್ಟತನದಿಂದ ಹೋರಾಟ ನಡೆಸುತ್ತಿದೆ. ಏತನ್ಮಧ್ಯೆ ಲಾಕ್ ಡೌನ್ ಗೂ ಮುಂಚೆ ಕೆಲಸಕ್ಕಾಗಿ ಪಾಕಿಸ್ತಾನದಿಂದ ಅಹಮದಾಬಾದ್ ಗೆ ಬಂದಿದ್ದ ವಲಸೆ ಕಾರ್ಮಿಕರು ಈಗ ನಾವು ವಾಪಸ್ ಹೋಗಲ್ಲ. ಇಲ್ಲೇ ಉಳಿಯುತ್ತೇವೆ ಎಂದು ಪಟ್ಟು ಹಿಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪಾಕ್ ಕಾರ್ಮಿಕ ಅರ್ಜುನ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಬದುಕುವುದು ಬಹಳ ಕಷ್ಟ. ಭಾರತದ ಸರ್ಕಾರ ಮತ್ತು ಇಲ್ಲಿನ ಜನರು ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡಿದ್ದೇವೆ. ಜೊತೆಗೆ ನಮ್ಮ ಮುಂದಿನ ಜೀವನಕ್ಕೆ ಹಾಗೂ ನಮ್ಮ ಮಕ್ಕಳ ಭವಿಷ್ಯದ ಒಳಿತಿಗಾಗಿ ನಾವು ಪಾಕಿಸ್ತಾನಕ್ಕೆ ಹೋಗದೆ ಇಲ್ಲೇ ಉಳಿಯಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನದಲ್ಲಿ ಒಟ್ಟು 49,530 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪಂಜಾಬ್ ನಲ್ಲಿ 17,382, ಸಿಂಧ್ ನಲ್ಲಿ 19,924, ಖೈಬರ್-ಪಖ್ತುನ್ಖ್ವಾದಲ್ಲಿ 7,155, ಬಲೂಚಿಸ್ತಾನದಲ್ಲಿ 3,074, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 602, ಇಸ್ಲಾಮಾಬಾದ್ ನಲ್ಲಿ 1,235 ಪ್ರಕರಣಗಳು ದಾಖಲಾಗಿವೆ. ಇಲ್ಲಿವರೆಗೂ ಕೊರೊನಾಗೆ ಸುಮಾರು 1,052 ಮಂದಿ ಬಲಿಯಾಗಿದ್ದಾರೆ.








