ಪುಟಿನ್ ವಿರುದ್ಧ ಪ್ರತಿಭಟನೆಗೆ ಇಳಿದ ರಷ್ಯಾ ಜನತೆ – Saaksha Tv
ರಷ್ಯಾ: ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದನ್ನು ವಿರೋಧಿಸಿ ರಷ್ಯಾ ಜನರೇ ಪುಟಿನ್ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ಗುರುವಾರ ಸಂಜೆ ಮಾಸ್ಕೋ ನಗರದ ಮಧ್ಯಭಾಗದಲ್ಲಿ 1,000ಕ್ಕೂ ಹೆಚ್ಚು ಜನರು ‘ಯುದ್ಧ ಬೇಡ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ I am Russian Sorry For That ಎಂದು ಬಿತ್ತಿ ಚಿತ್ರ ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.
https://twitter.com/anza_alessandro/status/1496958019917291520?ref_src=twsrc%5Etfw%7Ctwcamp%5Etweetembed%7Ctwterm%5E1496958019917291520%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Finternational%2Feurope%2Frussians-protest-in-moscow-against-putin-against-war-on-ukraine%2Fka20220225133903147
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ಹೊರವಲಯದಲ್ಲಿರುವ ಗೋಸ್ಟಿನಿ ಡ್ವೋರ್ ಶಾಪಿಂಗ್ ಆರ್ಕೇಡ್ ಬಳಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದ ಕಾರಣದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
https://twitter.com/Ukraine/status/1496716168920547331?ref_src=twsrc%5Etfw%7Ctwcamp%5Etweetembed%7Ctwterm%5E1496716168920547331%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Finternational%2Feurope%2Frussians-protest-in-moscow-against-putin-against-war-on-ukraine%2Fka20220225133903147
ಪುಟಿನ್ ಸರ್ಕಾರದ ವಿರುದ್ಧ ಪ್ರತಿಭಟನೆ ಕೇವಲ ಒಂದೆರೆಡು ನಗರಗಳಿಗೆ ಮಾತ್ರ ಸೀಮಿತವಾಗದೇ, ರಷ್ಯಾದ ಸುಮಾರು 54 ನಗರಗಳಲ್ಲಿ ನಡೆಯಿತು. ಈ ಹಿನ್ನೆಲೆಯಲ್ಲಿ ಸುಮಾರು 1,745 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಾಸ್ಕೋ ನಗರದಲ್ಲಿ ಒಂದರಲ್ಲೇ ಕನಿಷ್ಠ 957 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.








