ನಮ್ಮನ್ನು ಬೆಂಬಲಿಸಿ ಮತ್ತು ನಮ್ಮ ಸೈನ್ಯಕ್ಕೆ ಆರ್ಥಿಕ ಸಹಾಯ ಮಾಡಿ : ಉಕ್ರೇನ್ ಟ್ವೀಟ್ – Saaksha Tv
ಉಕ್ರೇನ್: ರಷ್ಯಾ ನಮ್ಮ ಮೇಲೆ ಮಿಲಿಟಿರಿ ಕಾರ್ಯಾಚರಣೆ ನಡೆಸುತ್ತಿದೆ. ನಮಗೆ ಬೆಂಬಲಿಸಿ, ನಮ್ಮ ಸೈನ್ಯಕ್ಕೆ ಆರ್ಥಿಕ ಸಹಾಯ ನೀಡಿ ಅಂತ ಉಕ್ರೇನ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಫೆಬ್ರವರಿ 24 ರಂದು ಬೆಳಿಗ್ಗೆ 5 ಗಂಟೆಗೆ, ರಷ್ಯಾದ ಒಕ್ಕೂಟದ ಸಶಸ್ತ್ರ ಪಡೆಗಳು ಉಕ್ರೇನ್ ಮೇಲೆ ದಾಳಿ ಮಾಡಿದವು. ಈ ಕಾರಣದಿಂದ #StayWithUkraine, ಯುರೋಪ್‌ನಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೋರಾಟದಲ್ಲಿ ಉಕ್ರೇನ್ ಅನ್ನು ಬೆಂಬಲಿಸಿ ಎಂದು ಟ್ವೀಟ್ ಮಾಡಿದೆ.
Donate for the Ukrainian army here: https://t.co/pVX50pPtVd pic.twitter.com/cjNYhNvWbX
— Ukraine / Україна (@Ukraine) February 24, 2022
ಉಕ್ರೇನಿಯನ್ನರು ಮೇಲುಗೈ ಸಾಧಿಸುತ್ತಾರೆ. ನಾವು ಹಿಂದೆ ರಷ್ಯಾ ಮತ್ತು ಸೋವಿಯತ್ ಸಾಮ್ರಾಜ್ಯಗಳ ವಿರುದ್ಧ ಹೋರಾಡಿದ್ದೇವೆ ಆಗಲೂ ನಾವು ವಿಜಯಸಾದಿಸಿದ್ದೇವೆ. ನಮಗೆ ಈಗ ನಿಮ್ಮ ಬೆಂಬಲ ಬೇಕು. ಉಕ್ರೇನಿಯನ್ ಸೈನ್ಯಕ್ಕೆ ಬೆಂಬಲಿಸಿ ಮತ್ತು ಉಕ್ರೇನ್ ಸೈನ್ಯಕ್ಕೆ ಆರ್ಥಿಕತೆ ಸಾಹಾಯ ಮಾಡಿ. ನಾವೆಲ್ಲರೂ ಒಟ್ಟಾಗಿ ರಷ್ಯಾ ಆಕ್ರಮಣವನ್ನು ನಿಲ್ಲಿಸೋಣ ಎಂದು ಹೇಳಿದೆ.








