Virat ಕೊಹ್ಲಿ ಬ್ಯಾಟಿಂಗ್ ಉತ್ತರಾಧಿಕಾರಿ ಯಾರು…?
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಆಧಾರ ಸ್ತಂಭ. ವಿಶ್ವ ಕ್ರಿಕೆಟ್ ನ ರನ್ ರಾಕ್ಷಸ.. ಮೈದಾನದಲ್ಲಿ ಒಂಟಿ ಸಲಗದಂತೆ ಘೀಳಿಡುವ ವಿರಾಟ್ ಕೊಹ್ಲಿ ಅದೆಷ್ಟೋ ಪಂದ್ಯಗಳನ್ನ ಸಿಂಗಲ್ ಹ್ಯಾಂಡೆಡ್ ಆಗಿ ಗೆಲ್ಲಿಸಿಕೊಟ್ಟಿದ್ದಾರೆ.
ಕ್ರೀಸ್ ನಲ್ಲಿ ವಿರಾಟ್ ಕೊಹ್ಲಿ ಇದ್ದರೇ ಅದು ಎಂತಹ ದೊಡ್ಡ ಮೊತ್ತದ ಗುರಿಯಾದ್ರೂ ಮಂಜಿನಂತೆ ಕರಗಿ ಹೋಗುತ್ತದೆ. ಅಸಾಧಾರಣ ಗುರಿಯನ್ನ ಮುಟ್ಟುವುದು, ಗ್ರೇಟ್ ಚೇಸಿಂಗ್ ಮಾಡಿ ಪಂದ್ಯಗಳನ್ನ ಗೆಲ್ಲಿಸಿಕೊಡುವುದರಲ್ಲಿ ವಿರಾಟ್ ಕೊಹ್ಲಿಗೆ ವಿರಾಟ್ ಕೊಹ್ಲಿಯೇ ಸಾರಿಸಾಟಿ..
ಇದಕ್ಕಾಗಿಯೇ ವಿರಾಟ್ ಕೊಹ್ಲಿ ಅವರನ್ನ ಚೇಸಿಂಗ್ ಮಾಸ್ಟರ್ ಅಂತಾನೂ ಕರೆಯುತ್ತಾರೆ. ಇದಲ್ಲದೇ ಸಮಯಕ್ಕೆ ತಕ್ಕಂತೆ ಬ್ಯಾಟ್ ಝಳಪಿಸುತ್ತಾ ಬೌಂಡರಿ, ಸಿಕ್ಸರ್ ಗಳನ್ನ ಸಿಡಿಸುವುದರಲ್ಲೂ ವಿರಾಟ್ ಪಂಟರ್.
ಒಂದೇ ಮಾತಿನಲ್ಲಿ ಹೇಳೋದಾದ್ರೆ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನ ಒನ್ ಅಂಡ್ ಓನ್ಲಿ ಮಾಸ್ಟರ್ ಪೀಸ್.. ಆದ್ರೆ ವಿರಾಟ್ ಕೊಹ್ಲಿ ಬಳಿಕ ಅವರ ಬ್ಯಾಟಿಂಗ್ ಉತ್ತರಾಧಿಕಾರಿ ಯಾರು..? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಇದಕ್ಕೆ ಶ್ರೀಲಂಕಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಉತ್ತರ ಸಿಕ್ಕಿದೆಯಂತೆ. ವಿರಾಟ್ ಕೊಹ್ಲಿ ಜಾಗಕ್ಕೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಸೂಕ್ತ ಆಟಗಾರ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದು ವಿಧ್ವಂಸವನ್ನ ಸೃಷ್ಠಿಸಿದರು. ಕೇವಲ 28 ಎಸೆತಗಳಲ್ಲಿ 57 ರನ್ ಗಳಿಸಿದರು. ಕೊಹ್ಲಿ ಬದಲಿಗೆ ಬ್ಯಾಟಿಂಗ್ ಗೆ ಬಂದ ಅಯ್ಯರ್ ಬೌಂಡರಿ ಸಿಕ್ಸರ್ ಗಳು ಮೂಲಕ ರನ್ ಸುನಾಮಿ ಎಬ್ಬಿಸಿದ್ರು.
ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನ ಕೊಹ್ಲಿ ಬ್ಯಾಕಪ್ ಆಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನೋಡಬೇಕು ಅಂತಾ ಸಂಜಯ್ ಬಂಗಾರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಯ್ಯರ್ ಮೂರನೇ ಕ್ರಮದಲ್ಲಿ ಅದ್ಭುತವಾಗಿವಾಡುತ್ತಾರೆ. ಟೀಂ ಇಂಡಿಯಾ ಬೆಂಜ್ ಸ್ಟ್ರೆಂಥ್ ಚೆನ್ನಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ಕೂಡ ವಿರಾಟ್‌ಗೆ ಬ್ಯಾಕಪ್‌ನಂತೆ ಅಯ್ಯರ್ ಅವರನ್ನ ಇರಿಸಿಕೊಳ್ಳಬೇಕು ಎಂದಿದ್ದಾರೆ.
virat-kohli shreyas iyer team india Cricket









