IND vs SL : ಇಶಾನ್ ಕಿಶಾನ್ ಇನ್ನೂ ಕಲಿಯೋದಿದೆ
ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್ ಅಬ್ಬರದ ಪ್ರದರ್ಶನ ನೀಡಿದರು.
ಕೇವಲ 56 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 89 ರನ್ ಗಳಿಸಿದರು. ಈ ಇನ್ನಿಂಗ್ಸ್ ನೊಂದಿಗೆ ಧೋನಿ ಮತ್ತು ಪಂತ್ ಗೆ ಸಾಧ್ಯವಾಗದ ದಾಖಲೆಯನ್ನು ಕಿಶನ್ ಸಾಧಿಸಿದರು.
89 ರನ್ ಗಳಿಸಿದ ಕಿಶನ್, ಟಿ20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.
ಈಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಇಶಾನ್ ಕಿಶನ್ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.
ಟಿ20ಯಲ್ಲಿ ಕಿಶನ್ ಉತ್ತಮ ದಾಖಲೆ ಹೊಂದಿದ್ದರೂ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸ್ಥಿರವಾಗಿ ಆಡುವ ಅಗತ್ಯವಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
“ಈ ಪಂದ್ಯದಲ್ಲಿ ಕಿಶನ್ ಉತ್ತಮ ಪ್ರದರ್ಶನ ನೀಡಿದರು ಆದರೆ ಇದು ಮೊದಲ ಪಂದ್ಯವಾಗಿತ್ತು, ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ತಡವಡಿಸಿದ್ರು. ಲಕ್ನೋ ಪಿಚ್ ಬ್ಯಾಟರ್ ಗಳಿಗೆ ಸಹಾಯ ಮಾಡುತ್ತದೆ.
ಆದರೆ ಕಿಶನ್ ಆಡಿದ ಡ್ರೈವ್ ಮತ್ತು ಪ್ಲೇ ಶಾಟ್‌ಗಳು ಅತ್ಯುತ್ತಮವಾಗಿವೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಸ್ಥಿರತೆಯ ಅಗತ್ಯವಿದೆ. ಸ್ಥಿರ ಪ್ರದರ್ಶನ ನೀಡಿದರೆ ಭಾರತೀಯ ಟಿ20 ವಿಶ್ವಕಪ್ ತಂಡದಲ್ಲಿ ಖಂಡಿತವಾಗಿಯೂ ಇರುತ್ತಾರೆ ಎಂದು ತಿಳಿಸಿದರು.
ind-vs-sl-Sunil Gavaskar Urges Ishan Kishan To Be Consistent saaksha tv








