ಖಾಸಗಿ ಫ್ಲೈಯಿಂಗ್ ಅಕಾಡೆಮಿ ಹೆಲಿಕಾಪ್ಟರ್ ಪತನ – ಪೈಲಟ್ ಸಾವು…
ಹೆಲಿಕಾಪ್ಟರ್ ಅಪಘಾತದಲ್ಲಿ ಟ್ರೈನಿ ಪೈಲಟ್ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಕೃಷ್ಣಾ ನದಿಯ ನಾಗಾರ್ಜುನಸಾಗರ ಅಣೆಕಟ್ಟಿನ ಸಮೀಪವಿರುವ ಪೆದ್ದವೂರ ಬ್ಲಾಕ್‌ನ ತುಂಗತುರ್ಥಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಭಾರೀ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಹೆಲಿಕಾಪ್ಟರ್ ಪತ್ತೆ ಮಾಡಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ತರಬೇತಿಯಲ್ಲಿತ್ತು ಎಂದು ತಿಳಿದುಬಂದಿದೆ.
ಸೆಸ್ನಾ-152 ಎರಡು ಆಸನಗಳ ಹೆಲಿಕಾಫ್ಟರ್ ಹೈದರಾಬಾದ್‌ನ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿತ್ತು.
ಅಧಿಕೃತ ಮಾಹಿತಿ ಪ್ರಕಾರ, 10.50ಕ್ಕೆ ಅಪಘಾತ ಸಂಭವಿಸಿದೆ. ಟ್ರೈನಿ ಪೈಲಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನಲ್ಗೊಂಡ ಎಸ್ಪಿ ಖಚಿತಪಡಿಸಿದ್ದಾರೆ. ಮೃತ ಪೈಲಟ್ ಅನ್ನು ತಮಿಳುನಾಡು ಮೂಲದ ಮಹಿಮಾ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೆರ್ಲಾದಿಂದ ಭಾನುವಾರ ಬೆಳಗ್ಗೆ ಪ್ರಯಾಣ ಬೆಳೆಸಿದ್ದಾಳೆ.








