Plane Crash : ತೆಲಂಗಾಣದಲ್ಲಿ ತರಬೇತಿ ನಿರತ ವಿಮಾನ ಪತನ – ಪೈಲೆಟ್ , ತರಬೇತನಿರತ ಪೈಲೆಟ್ ಸಾವು
ತರಬೇತಿನಿರತ ವಿಮಮಾನ ಪತನವಾಗಿದ್ದು , ಮಹಿಳಾ ಪೈಲೆಟ್ ಜೊತೆಗೆ ತರಬೇತಿ ನಿರತ ಪೈಲೆಟ್ ಸಾವನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.. ಮಹಿಮಾ (28) ಮೃತ ಪೈಲೆಟ್ ಆಗಿದ್ದಾರೆ. ಫ್ಲೈಟೆಕ್ ಏವಿಯೇಷನ್ ಸೆಸ್ನಾ 152 ವಿಮಾನವು – ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೆರ್ಲಾದಿಂದ ಟೆಕ್ ಆಫ್ ಆಗಿತ್ತು.
ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಹಾರುತ್ತಿದ್ದ ವಿಮಾನ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆದ್ದಪುರ ಮಂಡಲ, ತುಂಗತ್ತುರಿ ಗ್ರಾಮದ ಕೃಷಿ ಕ್ಷೇತ್ರದಲ್ಲಿ ನೆಲಕ್ಕೆ ಅಪ್ಪಳಿಸುವ ಮುನ್ನವೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ವಿಮಾನವು ಫ್ಲೈಟೆಕ್ ಏವಿಯೇಷನ್ ಅಕಾಡೆಮಿ ಎಂಬ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದೆ.