Ukraine : ರಷ್ಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳ ಜಾಹೀರಾತಿಗೆ ತಡೆ ನೀಡಿದ FaceBook
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದು , ಉಕ್ರೇನ್ ಪರಿಸ್ಥಿತಿ ಅತ್ಯಂತ ಭೀಭತ್ಸವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿರುವ ಸಂದರ್ಭದಲ್ಲಿ ಅಮೆರಿಕಾ ಸರ್ಕಾರವು ಸೇರಿದಂತೆ ಪಾಶ್ಚಿಮಾತ್ಯ ದೇಶಗಳು , ರಷ್ಯಾ ಅಧಧ್ಯಕ್ಷ ವ್ಲಾಡಿಮಾರ್ ಪುಟಿನ್ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 198 ಪ್ರಜೆಗಳು ಹತ್ಯೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ವಾಹಿತಿ ವರದಿ ಮಾಡಿದೆ.
ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲಿನ ದಾಳಿಯನ್ನು ಮುಂದುವರಿಸಿವೆ. ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಣ ಸಂಪಾದಿಸುವ ರಷ್ಯಾದ ಮಾಧ್ಯಮಗಳಿಗೆ ಫೇಸ್‌ಬುಕ್ ನಿರ್ಬಂಧ ವಿಧಿಸಿದೆ. ನಾವು ಈಗ ರಷ್ಯಾದ ಮಾಧ್ಯಮಗಳು ವಿಶ್ವದ ಯಾವುದೇ ಭಾಗದಲ್ಲಿ ನಮ್ಮ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸುತ್ತಿದ್ದೇವೆ ಎಂದು ಫೇಸ್‌ಬುಕ್‌ನ ಭದ್ರತಾ ನೀತಿ ವಿಭಾಗ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಫೇಸ್‌ಬುಕ್ ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಿಗೆ ಲೇಬಲ್ ಹಾಕುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ನಿ ನ್ನೆ (ಶುಕ್ರವಾರ), ರಷ್ಯಾದ ನಾಲ್ಕು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವಿಚಾರದ ಸ್ವತಂತ್ರ ಫ್ಯಾಕ್ಟ್ ಚೆಕ್ ಮತ್ತು ಲೇಬಲ್ ಹಾಕುವುದನ್ನು ನಿಲ್ಲಿಸುವಂತೆ ರಷ್ಯಾದ ಅಧಿಕಾರಿಗಳು ನಮಗೆ ಆದೇಶಿಸಿದರು. ನಾವು ನಿರಾಕರಿಸಿದ್ದೇವೆ ಎಂದು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾದ ನಿಕ್ ಕ್ಲೆಗ್ ತಿಳಿಸಿದ್ದಾರೆ.








