Puneeth Rajkumar : James : ಅಪ್ಪು ‘ಜೇಮ್ಸ್’ ಸಿನಿಮಾ 15 ದೇಶಗಳಲ್ಲಿ ರಿಲೀಸ್..!!
ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ 5 ಭಾಷೆಗಳಲ್ಲಿ ಮೂಡಿಬರುತ್ತಿದೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್ ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ.. ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್ ಕಾತರತೆಯನ್ನ ಹೆಚ್ಚಿಸಿದೆ… ಅಂದ್ಹಾಗೆ ಸಿನಿಮಾ ಮಾರ್ಚ್ 17 ಕ್ಕೆ ರಿಲೀಸ್ ಆಗುತ್ತಿದೆ…
ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹೊರಬಿದ್ದಿದೆ… ಅದೇನೆಂದ್ರೆ ಈ ಜೇಮ್ಸ್ ಸಿನಿಮಾವನ್ನು ಒಟ್ಟು 15 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ ಎನ್ನಲಾಗ್ತಿದೆ. ಈ ಮೂಲಕ ಪುನೀತ್ ಕೊನೆ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನ ಮಾಡುತ್ತಿದ್ದೆ ಜೇಮ್ಸ್ ತಂಡ.
ಈ ಸಿನಿಮಾ ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ..