ರಷ್ಯಾ ಪಡೆಗಳು ಆಕ್ರಮಣದ ವೇಗ ತಗ್ಗಿಸಿವೆ ಎಂದ ಉಕ್ರೇನ್ ಮಿಲಿಟರಿ…
ಉಕ್ರೇನ್ ವಿರುದ್ಧ ರಷ್ಯಾದ ದಾಳಿಯು ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಕಡಿಮೆ ಮಾಡಿವೆ ಎಂದು ಉಕ್ರೇನಿಯನ್ ಮಿಲಿಟರಿ ಸೋಮವಾರ ಹೇಳಿದೆ.
“ರಷ್ಯಾದ ಆಕ್ರಮಣಕಾರರು ಆಕ್ರಮಣದ ವೇಗವನ್ನು ಕಡಿಮೆ ಮಾಡಿದ್ದಾರೆ, ಆದರೆ ಇನ್ನೂ ಕೆಲವು ಪ್ರದೇಶಗಳನ್ನ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುವ ಮೂಲಕ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯ ದೇಶದ ಶಸ್ತ್ರಾಸ್ತ್ರಗಳ ಬೆಂಬಲದೊಂದಿಗೆ ಉಕ್ರೇನ್ ಪಡೆಗಳು ರಷ್ಯಾ ಸೈನ್ಯವನ್ನ ತಡೆಯುವಲ್ಲಿ ಭಾಗಶಃ ಯಶಸ್ವಿಯಾಗಿವೆ…
ದೇಶದ ವಾಯುವ್ಯ ಮತ್ತು ಉತ್ತರದಲ್ಲಿರುವ ನಗರಗಳಾದ ಝೈಟೊಮಿರ್ ಮತ್ತು ಚೆರ್ನಿಗಿವ್ ನಗರಗಳಲ್ಲಿನ ವಸತಿ ಕಟ್ಟಡಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನಿಯನ್ ಮಿಲಿಟರಿ ಆರೋಪಿಸಿದೆ.
“ಅದೇ ಸಮಯದಲ್ಲಿ, ಮಿಲಿಟರಿ ಕಾರ್ಯಾಚರಣೆಯ ಗುರಿ ಸಾಧಿಸಲು ರಷ್ಯಾದ ಎಲ್ಲಾ ಪ್ರಯತ್ನಗಳು ವಿಫಲವಾದವು” ಎಂದು ಮಿಲಿಟರಿ ಹೇಳಿದೆ. “ಶತ್ರುಗಳು ನಿರುತ್ಸಾಹಗೊಂಡಿದ್ದಾರೆ ಮತ್ತು ಭಾರೀ ನಷ್ಟವನ್ನು ಹೊಂದಿದ್ದಾರೆ” ಎಂದು ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ.
Ukraine says Russian troops ‘reduced pace of offensive’