ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Top 5 : ಪ್ರಮುಖ ರಾಷ್ಟ್ರೀಯ ಸುದ್ದಿಗಳು

Namratha Rao by Namratha Rao
March 1, 2022
in National, Newsbeat, ದೇಶ - ವಿದೇಶ
shivamogga Siddaramaiah Basavaraja bommai film sports Saaksha Tv
Share on FacebookShare on TwitterShare on WhatsappShare on Telegram

Top 5 : ಪ್ರಮುಖ ರಾಷ್ಟ್ರೀಯ ಸುದ್ದಿಗಳು

ಪಿಎಂ ಗತಿಶಕ್ತಿ ಯೋಜನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ – ಮೋದಿ

Related posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

September 1, 2026
ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

September 1, 2026

ಪಿಎಂ ಗತಿಶಕ್ತಿ ಯೋಜನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ವರ್ಚುವಲ್ ಮೂಲಕ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು.

ಈ ಬಾರಿ ಮಂಡನೆಯಾಗಿರುವ ಕೇಂದ್ರದ ಬಜೆಟ್ 21ನೇ ಶತಮಾನದ ವಿಕಾಸದ ಪ್ರತೀಕವಾಗಿದೆ. ಪಿಎಂ ಗತಿಶಕ್ತಿ ಯೋಜನೆ ಆರ್ಥಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ. ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ, ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಮೋದಿ ತಿಳಿಸಿದರು,

ಖಾಸಗಿ ಕೈಗಾರಿಕೆಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಪ್ರಗತಿ ಸಾಧಿಸಬೇಕು. ರಾಜ್ಯ ಸರ್ಕಾರಗಳು ಸೂಕ್ತ ಯೋಜನೆ ರೂಪಿಸುವ ಮೂಲಕ ಪರಿಣಾಮಕಾರಿ ಅನುಷ್ಠಾನಗೊಳಿಸುವುದು ಅಗತ್ಯ ಎಂದರು.

ರಸ್ತೆ ಸಂಪರ್ಕಗಳನ್ನು ಜೋಡಿಸುವ ಮೂಲಕ ಸಾರಿಗೆ ವೆಚ್ಚವನ್ನು ಕಡಿಮೆಗೊಳಿಸಿ, ತಂತ್ರಜ್ಞಾನದ ಸಹಾಯದಿಂದ ಗುಣಮಟ್ಟದ ಸೇವೆ, ಸಮಯ ಉಳಿತಾಯ ಮಾಡುವುದು ಸಾಧ್ಯವಾಗಲಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ತಿಳಿಸಿದರು.

 

ಬಜೆಟ್ ಸಂವಾದ – ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ  ಅಳವಡಿಕೆಗೆ ಬಜೆಟ್ ನಲ್ಲಿ ಒತ್ತು – ಸೀತಾರಾಮನ್

ಚೆನೈನಲ್ಲಿ ಬಜೆಟ್ ಕುರಿತಂತೆ ಕೈಗಾರಿಕೋದ್ಯಮಿಗಳು  ಸಂವಾದ ಕಾರ್ಯಕ್ರಮದಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭಾಗವಹಿಸಿದರು. ಸಂವಾದ ನಡೆಸುವುದರಿಂದ ಉಪಯುಕ್ತ ಮಾಹಿತಿ ದೊರಕಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಬಜೆಟೋತ್ತರ ಸಮಾವೇಶ ಉದ್ದೇಶಿಸಿ ಅವರು, ಸಾಂಕ್ರಾಮಿಕದ ಬಳಿಕ ಆರ್ಥಿಕತೆಗೆ ಸ್ಥಿರತೆ ಒದಗಿಸುವ, ನೀತಿಗಳನ್ನು ಮತ್ತು ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಮಂಡನೆಯಾದ ಕಳೆದ ಸಾಲಿನ ಬಜೆಟ್ ನ ಮುಂದುವರಿಕೆಯಾಗಿದೆ ಎಂದು ಹೇಳಿದರು. ಮೂಲಸೌಕರ್ಯಗಳ ಮೇಲಿನ ಹೂಡಿಕೆಯ ಹೆಚ್ಚಳದಿಂದ ದ್ವಿಗುಣ ಪರಿಣಾಮ ಪಡೆಯಬಹುದು ಎಂದು ತಿಳಿಸಿದರು.

ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆಯೂ ಚಿಂತಿಸಲಾಗಿದ್ದು, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದರು. ನಂತರ ನೇರ ಸಂವಾದದಲ್ಲಿ ಪಾಲ್ಗೊಂಡು, ಮಹಿಳೆಯರಲ್ಲಿ ಅಪಾರವಾದ ಕೌಶಲವಿದ್ದು, ಅದರ ಸಮರ್ಥ ಬಳಕೆಗೆ ಸಲಹೆ ನೀಡುವಂತೆ ತಿಳಿಸಿದರು.

ಉಕ್ರೇನ್ ಬಿಕ್ಕಟ್ಟು- ಮೋದಿಯವರಿಗೆ ಬೇಷರತ್ ಬೆಂಬಲ ನೀಡಿದ ಮಮತಾ ಬ್ಯಾನರ್ಜಿ

ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೇಷರತ್ ಬೆಂಬಲವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದಾರೆ.  ಬಿಕ್ಕಟ್ಟಿನಿಂದ ಹೊರಬರಲು ರಾಷ್ಟ್ರೀಯ ಸಂಕಲ್ಪಕ್ಕಾಗಿ ಸರ್ವಪಕ್ಷ ಸಭೆಯನ್ನು ಕರೆಯುವ ಬಗ್ಗೆ ಪರಿಗಣಿಸುವಂತೆ ಮೋದಿಯನ್ನ  ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಬರೆದ ಪತ್ರದಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಮತ್ತು ವಿಶೇಷವಾಗಿ “ಸಂಕಷ್ಟದಲ್ಲಿರುವ ನಮ್ಮ ವಿದ್ಯಾರ್ಥಿಗಳಿಗೆ ತ್ವರಿತ ಸಹಾಯ” ನೀಡುವಲ್ಲಿ ದೇಶವು ಒಗ್ಗಟ್ಟಿನಿಂದ ನಿಂತಿದೆ ಎಂದು ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ, ಭಾರತವು ಜಗತ್ತಿಗೆ ಶಾಂತಿಯುತ ಪರಿಹಾರವನ್ನು ನೀಡಲು ಮುಂದಾಗಬೇಕು ಮತ್ತು ನಾವು ಅದನ್ನು ಧೈರ್ಯದಿಂದ ಮತ್ತು ಹಿಂಜರಿಕೆಯಿಲ್ಲದೆ ನೀಡಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.

“…ಭೀಕರ ಅಂತರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಲ್ಲಲು ನಮ್ಮ ದೇಶೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುತ್ತೇವೆ. ಒಂದು ರಾಷ್ಟ್ರವಾಗಿ ನಮ್ಮ ಘನತೆ ಅವಿರೋಧ ಮತ್ತು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನಾವು ಇದನ್ನು ಮಾಡುತ್ತೇವೆ.

ನಾವು ನಮ್ಮ ವಿದೇಶಾಂಗ ವ್ಯವಹಾರಗಳನ್ನು ನಡೆಸುವ ತತ್ವಗಳು ಜಾಗತಿಕ ರಂಗದಲ್ಲಿ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಇದನ್ನು ಮಾಡುತ್ತೇವೆ, ”ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಟಿಎಂಸಿ ಮುಖ್ಯಸ್ಥರಾಗಿರುವ ಮಮತ ಬ್ಯಾನರ್ಜಿ ಅವರು ಹಿರಿಯ ಮುಖ್ಯಮಂತ್ರಿಯಾಗಿ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕರಾಗಿ “ಉಕ್ರೇನ್ ಯುದ್ಧದ ಪ್ರಸ್ತುತ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ” ಎಂದು ಹೇಳಿದರು.

 

ಉಕ್ರೇನ್  ಬಿಕ್ಕಟ್ಟು – ಭಾರತೀಯರನ್ನ ಕರೆತರಲು ವಿಮಾನ ಕಳುಹಿಸಿದ ಸ್ಪೈಸ್ ಜೆಟ್

ರಷ್ಯಾದ ಸೇನಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸ್ಪೈಸ್‌ಜೆಟ್  ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ವಿಶೇಷ ವಿಮಾನವನ್ನು ಕಳುಹಿಸಿಕೊಡಲಿದೆ.

ಫೆಬ್ರವರಿ 24 ರಿಂದ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹಾಗಾಗಿ ಉಕ್ರೇನ್‌ನೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು, ರೊಮೇನಿಯಾ ಮತ್ತು ಹಂಗೇರಿಯಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಶನಿವಾರದಿಂದ ಪ್ರಾರಂಭಿಸಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಇದುವರೆಗೆ ಐದು  ವಿಮಾನಗಳಲ್ಲಿ ಒಟ್ಟು 1,156 ಭಾರತೀಯ ಪ್ರಜೆಗಳನ್ನು ಕರೆತಂದಿದೆ.

240 ಭಾರತೀಯ ಪ್ರಜೆಗಳನ್ನ ಹೊತ್ತ  ಆರನೇ ವಿಮಾನ ಸೋಮವಾರ ಸಂಜೆ ದೆಹಲಿಗೆ ಇಳಿಯಲಿದೆ. ಸುಮಾರು 14,000 ಭಾರತೀಯರು, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು, ಪ್ರಸ್ತುತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸೋಮವಾರ ಸಂಜೆ ದೆಹಲಿಯಿಂದ ಹೊರಡಲಿರುವ ಈ ವಿಶೇಷ ವಿಮಾನಕ್ಕೆ ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಬಳಸುವುದಾಗಿ ಸ್ಪೈಸ್ ಜೆಟ್ ತಿಳಿಸಿದೆ.

“ವಿಮಾನವು ದೆಹಲಿಯಿಂದ ಬುಡಾಪೆಸ್ಟ್‌ಗೆ ಹಾರಲಿದೆ, ಹಿಂತಿರುಗುವ ವಿಮಾನವು ಜಾರ್ಜಿಯಾದ ಕುಟೈಸಿ ಮೂಲಕ ಕಾರ್ಯನಿರ್ವಹಿಸುತ್ತದೆ” ಎಂದು ಸ್ಪೈಸ್ ಜೆಟ್ ಹೇಳಿದೆ. ವಿದ್ಯಾರ್ಥಿಗಳನ್ನ ಕರೆತರಲು ಹೆಚ್ಚಿನ  ವಿಮಾನಗಳನ್ನು ನಿರ್ವಹಿಸಲು ಯೋಜಿಸುತ್ತಿದೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ.

 

UKRAINE | ಮಗನ ಚಿಂತೆಯಲ್ಲಿ ಪ್ರಾಣ ಬಿಟ್ಟ ತಾಯಿ

ಮಗನ ಚಿಂತೆಯಲ್ಲಿ ಪ್ರಾಣ ಬಿಟ್ಟ ತಾಯಿ

ತಮಿಳುನಾಡಿನ ತಿರುಪತ್ತೂರಲ್ಲಿ ಘಟನೆ

ಪುದೂರಿನ ಶಶಿಕಲಾ ಮೃತ ಮಹಿಳೆ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮಗ

ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆ

ತಿರುಪತ್ತೂರ್  : ಉಕ್ರೇನ್ ನಲ್ಲಿ ಮಗ ಸಿಲುಕೊಂಡಿರುವ ಚಿಂತೆಯಲ್ಲಿ ತಾಯಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯ ಪುದೂರಿನಲ್ಲಿ ನಡೆದಿದೆ. ಶಶಿಕಲಾ ಮೃತ ದುರ್ದೈವಿಯಾಗಿದ್ದಾರೆ.

ರಷ್ಯಾ ದಾಳಿಯಿಂದಾಗಿ ಉಕ್ರೇನ್​ನಲ್ಲಿ ಅಂದಾಜು 13 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ.  

ಅದರಂತೆ ಶಶಿಕಲಾ ಅವರ  ಮಗ ಶಕ್ತಿವೆಲ್ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಉಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

SON stuck IN UKRAINE MOTHER DIES IN TIRUPATTUR at tamilunadu saaksha  tv

ಇತ್ತ ಮೊದಲೇ ಬಿಪಿ ಮತ್ತು ಡಯಾಬಿಟಿಸ್​ನಿಂದ ಬಳಲುತ್ತಿದ್ದ ಶಶಿಕಲಾ ಉಕ್ರೇನ್​ನಲ್ಲಿ ಯುದ್ಧ ಆರಂಭವಾದ ಬಳಿಕ ಮಗನ ಪರಿಸ್ಥಿತಿ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದರು.

ಅದೇ ಚಿಂತೆಯಲ್ಲಿದ್ದ ಶಶಿಕಲಾ ಅವರು ಫೆಬ್ರವರಿ ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಶಿಕಲಾ ಅವರು ಮೃತಪಟ್ಟಿದ್ದಾರೆ.

ಸದ್ಯ ಉಕ್ರೇನ್ ನಲ್ಲಿರುವ ಶಕ್ತಿವೆಲ್,  ವಿಡಿಯೋ ಕಾಲ್ ನಲ್ಲಿಯೇ ತಾಯಿ ಅಂತಿಮ ದರ್ಶನ ಪಡೆದಿದ್ದಾರೆ.

Tags: #saakshatvModinational news
ShareTweetSendShare
Join us on:

Related Posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

by Shwetha
September 1, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ...

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

by Shwetha
September 1, 2026
0

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಪರಿಷ್ಕೃತ ಮಾಹಿತಿಯನ್ನು ಸಲ್ಲಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಗೆ ಸುಪ್ರೀಂ...

ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ; ಮಕ್ಕಳಲ್ಲಿ ಕಾಲು-ಬಾಯಿ ಬೇನೆ ಸೋಂಕು ಏರಿಕೆ

ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ; ಮಕ್ಕಳಲ್ಲಿ ಕಾಲು-ಬಾಯಿ ಬೇನೆ ಸೋಂಕು ಏರಿಕೆ

by Shwetha
September 1, 2026
0

ರಾಜ್ಯದಲ್ಲಿ ವೈರಲ್ ಜ್ವರದ ಪ್ರಕರಣಗಳ ಜೊತೆಗೆ ಮಕ್ಕಳಲ್ಲಿ ಕಾಲು-ಬಾಯಿ ಬೇನೆ (Hand, Foot and Mouth Disease - HFMD) ಸೋಂಕಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಐದು...

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?

by Shwetha
September 1, 2026
0

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಈಗ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು...

ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ

ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ

by Shwetha
September 1, 2026
0

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಮುಂದೆ ತಾವು ಯಾವುದೇ ವಿಧಾನಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram