Ukraine – Russia War updates : ಪ್ರಮುಖ ಬೆಳವಣಿಗೆಗಳು
ರಷ್ಯಾ ಪಡೆಗಳು ಆಕ್ರಮಣದ ವೇಗ ತಗ್ಗಿಸಿವೆ ಎಂದ ಉಕ್ರೇನ್ ಮಿಲಿಟರಿ…
ಉಕ್ರೇನ್ ವಿರುದ್ಧ ರಷ್ಯಾದ ದಾಳಿಯು ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಕಡಿಮೆ ಮಾಡಿವೆ ಎಂದು ಉಕ್ರೇನಿಯನ್ ಮಿಲಿಟರಿ ಸೋಮವಾರ ಹೇಳಿದೆ.
“ರಷ್ಯಾದ ಆಕ್ರಮಣಕಾರರು ಆಕ್ರಮಣದ ವೇಗವನ್ನು ಕಡಿಮೆ ಮಾಡಿದ್ದಾರೆ, ಆದರೆ ಇನ್ನೂ ಕೆಲವು ಪ್ರದೇಶಗಳನ್ನ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುವ ಮೂಲಕ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯ ದೇಶದ ಶಸ್ತ್ರಾಸ್ತ್ರಗಳ ಬೆಂಬಲದೊಂದಿಗೆ ಉಕ್ರೇನ್ ಪಡೆಗಳು ರಷ್ಯಾ ಸೈನ್ಯವನ್ನ ತಡೆಯುವಲ್ಲಿ ಭಾಗಶಃ ಯಶಸ್ವಿಯಾಗಿವೆ…
ದೇಶದ ವಾಯುವ್ಯ ಮತ್ತು ಉತ್ತರದಲ್ಲಿರುವ ನಗರಗಳಾದ ಝೈಟೊಮಿರ್ ಮತ್ತು ಚೆರ್ನಿಗಿವ್ ನಗರಗಳಲ್ಲಿನ ವಸತಿ ಕಟ್ಟಡಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನಿಯನ್ ಮಿಲಿಟರಿ ಆರೋಪಿಸಿದೆ.
“ಅದೇ ಸಮಯದಲ್ಲಿ, ಮಿಲಿಟರಿ ಕಾರ್ಯಾಚರಣೆಯ ಗುರಿ ಸಾಧಿಸಲು ರಷ್ಯಾದ ಎಲ್ಲಾ ಪ್ರಯತ್ನಗಳು ವಿಫಲವಾದವು” ಎಂದು ಮಿಲಿಟರಿ ಹೇಳಿದೆ. “ಶತ್ರುಗಳು ನಿರುತ್ಸಾಹಗೊಂಡಿದ್ದಾರೆ ಮತ್ತು ಭಾರೀ ನಷ್ಟವನ್ನು ಹೊಂದಿದ್ದಾರೆ” ಎಂದು ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ.
Russia-ukraine-war | ಅದು ಬಿಯರ್ ಅಲ್ಲ ಉಕ್ರೇನ್ ಆಯುಧ
ಉಕ್ರೇನ್ ನ ಲಿವ್ ಪೋಲೆಂಡ್ ಬಾರ್ಡರ್ ಗೆ 70 ಕಿಲೋ ಮೀಟರ್ ದೂರದಲ್ಲಿದೆ. ಈ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ರಷ್ಯಾದ ಪಡೆಗಳು ಎರಡು ದಿನಗಳಿಂದ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸುತ್ತಿವೆ. ಸೇನೆಯ ಬುಲೆಟ್‌ಗಳು, ಬಾಂಬ್‌ಗಳ ಜೊತೆಗೆ ಮೇಲಿಂದ ಬೀಳುವ ಬಿಯರ್ ಬಾಟಲಿಗಳು.. ಭಾರಿ ಶಬ್ಧದೊಂದಿಗೆ ಸ್ಫೋಟಗೊಳ್ಳುತ್ತಿವೆ. ಹೀಗಾಗಿ ಲಿವ್ ನಗರಕ್ಕೆ ಪ್ರವೇಶಿಸಲು ರಷ್ಯಾ ಹರಸಾಹಸ ಪಡುತ್ತಿದೆ.
ಉಕ್ರೇನ್‌ನ ಲಿವ್ ಪಟ್ಟಣದಲ್ಲಿರುವ ಪ್ರಾವ್ಡಾ ಬ್ರೂವರಿ ಬಿಯರ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಆದರೆ, ಕಂಪನಿಯು ಯುದ್ಧದ ನಂತರ ಬಿಯರ್‌ಗಳನ್ನು ತಯಾರಿಸುವುದನ್ನು ನಿಲ್ಲಿಸಿದೆ. ಬದಲಿಗೆ ರಷ್ಯಾದ ಮಿಲಿಟರಿಗಾಗಿ “ಮೊಲೊಟೊವ್ ಕಾಕ್ಟೈಲ್” ತಯಾರಿಸುತ್ತಿದೆ.. ಸದ್ಯ ಈ ಕಂಪನಿಯ ಉದ್ಯೋಗಿಗಳು ಈ ಬಾಟಲ್ ಬಾಂಬ್ ಗಳನ್ನು ತಯಾರಿಸುತ್ತಿದ್ದಾರೆ.
ಈ ಬಿಯರ್ ಬಾಟಲಿಗಳಿಗೆ ತೈಲ ಮತ್ತು ಪೆಟ್ರೋಲ್ ಮಿಶ್ರಣ ಮಾಡುತ್ತಿದ್ದಾರೆ. ಅದರೊಳಗೆ ಬಟ್ಟೆಯಲ್ಲಿ ಹಾಕಿ ರಷ್ಯಾದ ಪಡೆಗಳ ಕಡೆಗೆ ಎಸೆಯಲಾಗುತ್ತಿದೆ. ಒಳಗೆ ಇರುವ ಕಾಕ್‌ಟೈಲ್ ಪೆಟ್ರೋಲ್ ಮತ್ತು ಆಲ್ಕೋಹಾಲ್‌ನಂತೆ ಸುಡುವಂತಹದ್ದು. ಬಾಟಲಿಯ ಮುಚ್ಚಳದ ಬಟ್ಟೆಗೆ ಬೆಂಕಿ ತಾಕಿಸಿ ಶತ್ರು ಪಡೆಗಳತ್ತ ಎಸೆದರೆ ಎದುರಾಳಿಗಳು ಮಷಾಶ್ ಆಗುತ್ತಾರೆ.
2014 ರ ಕ್ರಿಮಿಯನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳ ಮೇಲೆ ಇದೇ ರೀತಿಯ ದಾಳಿಗಳನ್ನು ನಡೆಸಲಾಗಿತ್ತು. russia-ukraine-war-beer-bottle-becomes-power-bomb
Ukraine – Russia War : 5500 ರಷ್ಯಾದ ಸೈನಿಕರ ಹತ್ಯೆಗೈದ ಬಗ್ಗೆ ಉಕ್ರೇನ್ ಸಚಿವಾಲಯ ಮಾಹಿತಿ
ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನ ಅಮೆರಿಕಾ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿವೆ.. 4 ದಿನಗಳ ಉಕ್ರೇನ್ ರಷ್ಯಾ ನಡುವಿನ ಯುದ್ಧದಲ್ಲಿ ರಷ್ಯಾದ 5,500 ಸೈನಿಕರನ್ನು ಉಕ್ರೇನ್ ಸೈನಿಕರು ಹತ್ಯೆಗೈದಿರೋದಾಗಿ ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.. ಸುಮಾರು 5500 ರಷ್ಯಾದ ಸೈನಿಕರ ಹತ್ಯೆ ಮಾಡಲಾಗಿದ್ದು , 191 ರಷ್ಯಾದ ಟ್ಯಾಂಕ್ ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳು ಮತ್ತು 816 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ ಎಂದು ವರದಿಯಾಗಿದೆ.
ಸಾವುನೋವುಗಳ ಕುರಿತು ಅಧಿಕಾರಿಗಳು ನಿಖರವಾದ ಅಂಕಿಅಂಶವನ್ನು ನೀಡದಿದ್ದರೂ ಕೂಡ, ತನ್ನ ಪಡೆಗಳು ನಷ್ಟವನ್ನು ಅನುಭವಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರದಂದು ಪರೋಕ್ಷವಾಗಿ ಒಪ್ಪಿಕೊಂಡಿತ್ತು.. ರಷ್ಯಾದ ಆಕ್ರಮಣ ಆರಂಭವಾದ ಮೊಲದ ನಾಲ್ಕು ದಿನಗಳಲ್ಲಿ ಉಕ್ರೇನ್‌ನ 94 ನಾಗರಿಕರು ಮೃತಪಟ್ಟು, 354 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ಸೋಮವಾರ ಖಚಿತಪಡಿಸಿದೆ.