ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Top cinema news updates : ಸಿನಿಮಾ ಜಗತ್ತಿನ ಪ್ರಮುಖ ಸುದ್ದಿಗಳು

Namratha Rao by Namratha Rao
March 1, 2022
in Cinema, Newsbeat, ಮನರಂಜನೆ
cinema
Share on FacebookShare on TwitterShare on WhatsappShare on Telegram

Top cinema news updates : ಸಿನಿಮಾ ಜಗತ್ತಿನ ಪ್ರಮುಖ ಸುದ್ದಿಗಳು

Puneeth Rajkumar : James : ಅಪ್ಪು ‘ಜೇಮ್ಸ್’ ಸಿನಿಮಾ 15 ದೇಶಗಳಲ್ಲಿ ರಿಲೀಸ್..!!

Related posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

February 14, 2026
india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026

ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ 5 ಭಾಷೆಗಳಲ್ಲಿ ಮೂಡಿಬರುತ್ತಿದೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್ ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ.. ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್  ಕಾತರತೆಯನ್ನ ಹೆಚ್ಚಿಸಿದೆ… ಅಂದ್ಹಾಗೆ ಸಿನಿಮಾ ಮಾರ್ಚ್ 17 ಕ್ಕೆ ರಿಲೀಸ್ ಆಗುತ್ತಿದೆ…

james - saakshatv

ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹೊರಬಿದ್ದಿದೆ… ಅದೇನೆಂದ್ರೆ ಈ ಜೇಮ್ಸ್‌ ಸಿನಿಮಾವನ್ನು ಒಟ್ಟು 15 ದೇಶಗಳಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ತಯಾರಿ ನಡೆಸಿದೆ ಎನ್ನಲಾಗ್ತಿದೆ. ಈ ಮೂಲಕ ಪುನೀತ್ ಕೊನೆ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನ ಮಾಡುತ್ತಿದ್ದೆ ಜೇಮ್ಸ್ ತಂಡ.

ಈ ಸಿನಿಮಾ ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ..

 

ರಾಧೇ ಶ್ಯಾಮ್ ಅಡ್ಡಾದಲ್ಲಿ ಕಾಣಿಸಿಕೊಂಡ ಸೆಂಚುರಿ ಸ್ಟಾರ್ ಶಿವಣ್ಣ….

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ರಾಧೇ  ಶ್ಯಾಮ್ ಚಿತ್ರ  ತೆರೆಗೆ ಬರಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.   ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಅಭಿನಯದ ರೊಮ್ಯಾಂಟಿಕ್  ಪ್ರೇಮ ಕಥೆಯನ್ನ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇದೀಗ ರಾಧೇ ಶ್ಯಾಮ್ ತಂಡದಿಂದ  ಹೊಸ ಅಪ್ಡೇಟ್ ಬಂದಿದೆ. ಸ್ಯಾಂಡಲ್ವುಡ್  ನ ಸೆಂಚುರಿ ಸ್ಟಾರ್ ಶಿವಣ್ಣ ರಾಧೇಶ್ಯಾಮ್ ಬಳಗವನ್ನ ಕೂಡಿಕೊಂಡಿದ್ದಾರೆ.  ಈ ಬಗ್ಗೆ ಚಿತ್ರದ ನಿರ್ಮಾಪಕರೇ ಸ್ವತಃ ಮಾಹಿತಿ ನೀಡಿದ್ದಾರೆ.

ಶಿವರಾಜ್ ಕುಮಾರ್ ಮಾತ್ರವಲ್ಲದೇ ಎಸ್ ಎಸ್ ರಾಜಮೌಳಿ,  ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್, ಕೂಡ ರಾಧೇ ಶ್ಯಾಮ್ ಚಿತ್ರತಂಡ ಸೇರಿಕೊಂಡಿದ್ದಾರೆ.  ಇವರೆಲ್ಲ ಸಿನಿಮಾದಲ್ಲಿ ಏನ್ ಮಾಡ್ತಾರೆ ಅಂತ ಕೆಳ್ತೀರಾ ?? ಇಲ್ಲಿದೆ ಉತ್ತರ..

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತವ ಚಿತ್ರ  ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.  ಐದು  ಭಾಷೆಗಳಲ್ಲಿ ಬರುವ ಸಿನಿಮಾದ ನಿರೂಪಣಾ ಧ್ವನಿಯನ್ನ ಆಯಾ ಚಿತ್ರರಂಗದ   ಘಟಾನುಘಟಿಗಳು ವಹಿಸಿಕೊಂಡಿದ್ದಾರೆ.

ರಾಧೇ ಶ್ಯಾಮ್ ಚಿತ್ರದ ಕನ್ನಡ ಅವತರಣಿಕೆಯ ಸಿನಿಮಾಗೆ ನಮ್ಮ ಶಿವಣ್ಣ ನಿರೂಪಣಾ ಧ್ವನಿಯನ್ನ ನೀಡುತ್ತಿದ್ದಾರೆ.  ತೆಲುಗಿನಲ್ಲಿ ರಾಜಮೌಳಿ ಮತ್ತು ಮಲಯಾಳಂನಲ್ಲಿ  ಪೃಥ್ವಿರಾಜ್ ಸುಕುಮಾರನ್  ಅವರು ಆಯಾ ಭಾಷೆಗೆ ಧ್ವನಿ ನೀಡಿದ್ದಾರೆ.  ಈ ಮೂಲಕ ರಾಧೇ ಶ್ಯಾಮ್ ಚಿತ್ರಕ್ಕೆ ಇನ್ನಷ್ಟು ಬೆರಗು ಮೂಡಿಸಲು ಘಟಾನುಘಟಿಗಳು ರಾಧೇ ಶ್ಯಾಮ್ ನ ಭಾಗವಾಗಿದ್ದಾರೆ..

 

ನಿಮ್ಮ ಧ್ವನಿಯಿಂದ  ಈ ರೊಮ್ಯಾಂಟಿಕ್ ಕಥೆಯಿಂದ ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು ಎಂದು  ಶಿವರಾಜ್ ಕುಮಾರ್ ರಾಜಮೌಳಿ ಪೃಥ್ವಿರಾಜ್ ಸುಕುಮಾರನ್ ಅವರಿಗೆ  ರಾಧೆ ಶ್ಯಾಮ್ ಚಿತ್ರದ ನಿರ್ಮಾಪಕ ಸಂಸ್ಥೆ ಧನ್ಯವಾದ ತಿಳಿಸಿದೆ.

‘ರಾಧೆ ಶ್ಯಾಮ್​’ ಹಿಂದಿ ವರ್ಷನ್​ಗೆ ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಆ ಕಾರಣದಿಂದ ಹಿಂದಿ ಪ್ರೇಕ್ಷಕರಲ್ಲೂ ನಿರೀಕ್ಷೆ ಹೆಚ್ಚುವಂತಾಗಿದೆ. ಮಾ.11ರಂದು ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ. ರಾಧಾಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ಗೆ ಸಿನಿಪ್ರಿಯರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಕಣ್ತಂಬಿಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದಾರೆ.

 

RRR ಪ್ರೇ ರಿಲೀಸ್ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಲ್ಲ , ರಾಜ್ಯದ ಬೇರೆ ಕಡೆ ನಡೆಯಲಿದೆ…!!!

ಭಾರತದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಕ್ರೇಜ್ ಹೆಚ್ಚಿಸಿರುವ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ RRR,.. ಎಲ್ಲಾ ಸರಿ ಇದ್ದಿದ್ರೆ , ಸಿನಿಮಾ ಇಷ್ಟೊತ್ತಿಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಬೇಕಾಗಿತ್ತು.. ಆದ್ರೆ ಕೋವಿಡ್ ಕಾರಣದಿಂದಾಗಿ ಸಿನಿಮಾ ಪೋಸ್ಟ್ ಪೋನ್ ಆಯ್ತು.. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು ರಿಲೀಸ್ ಆಗಬೇಕಿತ್ತು. ಹೊಸ ರಿಲೀಸ್ ಡೇಟ್ ನಂತೆಯೇ ಮಾರ್ಚ್ 25 ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇಡೀ ಚಿತ್ರಪ್ರೇಮಿಗಳು ತ್ರಿಬಲ್ ಸಿನಿಮಾಗಾಗಿ ಕಾದು ಕುಳಿತಿದ್ದಾರೆ.

ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಗಳನ್ನ ಅದ್ಧೂರಿಯಾಗಿ ನಡೆಸುವ ಪ್ಲಾನ್ ನಲ್ಲಿ ಸಿನಿಮಾತಂಡವಿದೆ.. ಬೆಂಗಳೂರಿನಲ್ಲಿಯೂ ಕೆವಿಎನ್ ಸಹಯೋಗದೊಂದಿಗೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಅಷ್ಟಲ್ಲೇ ಕೊರೊನಾ ಕಾರಣಕ್ಕೆ ಸಿನಿಮಾದ ಬಿಡುಗಡೆ ಮುಂದೂಡಲಾಯ್ತು.. ಕಾರ್ಯಕ್ರಮ ರದ್ದಾಗಿತ್ತು. ಇದೀಗ ಮತ್ತೆ ಕರ್ನಾಟಕದಲ್ಲಿ ಪ್ರೀ ರಿಲೀಸ್ ಈವೆಂಟ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಆದರೆ ಈ ಬಾರಿ ಬೆಂಗಳೂರಿನ ಬದಲಿಗೆ ರಾಜ್ಯದ ಬೇರೆ ನಗರವನ್ನು ಪ್ರೀ ರಿಲೀಸ್ ಈವೆಂಟ್ ಗೆ ಸಿನಿಮಾತಂಡ ಆಯ್ಕೆ ಮಾಡಿಕೊಂಡಿದೆ.
ಹೌದು.. ಈ ಬಾರಿ ರಾಜ್ಯ ರಾಜಧಾನಿಯಲ್ಲ ಬದಲಾಗಿ ಚಿಕ್ಕಬಳ್ಳಾಪುರದಲ್ಲಿ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನ ಹಮ್ಮಿಕೊಂಡಡಿದೆ..

RRR - saakshatv

ಸಿನಿಮಾ ತಂಡ.. ಅಂದ್ಹಾಗೆ ಚಿಕ್ಕಬಳ್ಳಾಪುರವು ತೆಲುಗು ರಾಜ್ಯಕ್ಕೆ ಗಡಿಯಾಗಿದೆ. ಚಿಕ್ಕಬಳ್ಳಾಪುರದ ಸುತ್ತ ಮುತ್ತ ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ದೇವನಹಳ್ಳಿ, ಬಾಗೇಪಲ್ಲಿ, ಗುಡಿಬಂಡೆ, ಕೋಲಾರ ಈ ಭಾಗಗಳಲ್ಲಿ ತೆಲುಗು ಪ್ರಭಾವ ಹೆಚ್ಚಿದೆ. ತೆಲುಗು ಮಾತನಾಡುವ ಜಜನರು ಹೆಚ್ಚಿದ್ದಾರೆ.. ಇದನ್ನೇ ಗಮನದಲ್ಲಿಟ್ಟುಕೊಂಡು ಸಿನಿಮಾ ತಂಡ ಅಲ್ಲಿ ಪ್ರೀ ಈವೆಂಟ್ ನಡೆಸಲು ನಿರ್ಧಾರ ಮಾಡಿರಬಹುದು. ಮಾರ್ಚ್ 20 ರಂದು ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

ಕಂಗನಾ ನಿರೂಪಣೆಯ ಲಾಕಪ್ ರಿಯಾಲಿಟಿ ಶೋ ಗೆ ಕೋರ್ಟ್ ತಡೆ…

 

ವಿಕ್ರಾಂತ್ ರೋಣ 2…. ಬರಲಿದ್ಯಾ..??? ಕಿಚ್ಚ ಸುದೀಪ್ ಹೇಳಿದ್ದೇನು..??

ಬೆಂಗಳೂರು : ವಿಕ್ರಾಂತ್ ರೋಣ… ಕಿಚ್ಚ ಸುದೀಪ್ ಅಭಿನಯದ ಭಾರತೀಯ ಸಿನಿಮಾರಂಗದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ… ಈ ಸಿನಿಮಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ.. ಬರೀ ಗ್ಲಿಂಪ್ಸ್ ಮೂಲಕವೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿರುವ ಈ ಸಿನಿಮಾದ ಟಯಟಲ್ ಲಾಂಚ್ ಆಗಿದ್ದು , ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ… 3ಡಿ ತಂತ್ರಜ್ಞಾನದಲ್ಲಿ ಮೂಡಡಿರುತತ್ತಿರುವ ಈ ಸಿನಿಮಾ ಅನೇಕ ವಿಚಾರಗಳಿಂದ ಜಗತ್ತಿನ ಗಮನ ಸೆಲೆದಿದೆ..
ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹರಿದಾಡ್ತಿದೆ.. ಅದೇನೆಂದ್ರೆ ಬಾಹುಬಲಿ , ಕೆಜಿಎಫ್ ಪುಷ್ಪ , ಮಾದರಿಯಲ್ಲೇ ಈ ಸಿನಿಮಾದ ಪಾರ್ಟ್ 2 ಬರಬಹುದು ಅನ್ನೋದು..

 

ಹೌದು.. ಈಗ ಬಾಲಿವುಡ್ ಮುಂದೆ ಸೌತ್ ಅಬ್ಬರಿಸುತ್ತಿದೆ.. ಬಾಲಿವುಡ್ ಸಿನಿಮಾಗಳ ಮುಂದೆ ಇಡೀ ಭಾರತೀಯ ಸಿನಿಮಾರಂಗದವರೂ ಸೌತ್ ಸಿನಿಮಾಗಳಿಗೆ ಬಹುಪರಾಕ್ ಹೇಳ್ತಿದ್ದಾರೆ.. ಬಾಲಿವುಡ್ ಮಂದಿಯನ್ನ ಬೆಚ್ಚಿ ಬೀಳಿಸಿ ಮುಂದೆ ಸಾಗ್ತಿರುವ ಸೌತ್ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸೌಂಡ್ ಮಾಡ್ತಿವೆ.. ಮುಂದೆ ರಿಲೀಸ್ ಆಗಲಿರುವ ಬಿಗ್ ಬಜೆಟ್ ಬಹಹುನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿರೋ ವಿಕ್ರಾಂತ್ ರೋಣದ ಈ ಅಪ್ ಡೇಟ್ ಕಿಚ್ಚನ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ..
ಮತ್ತೊಂದೆಡೆ ಕಿಚ್ಚ ಸುದೀಪ್ ಅವರು ಮುಂಚೆಯಿಂದಲೂ ಬಾಲಿವುಡ್ , ಸೌತ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಅಲ್ಲಿಯೂ ಅಭಿಮಾನಿಗಳನ್ನ ಹೊಂದಿದ್ದಾರೆ..

ಅಂದ್ಹಾಗೆ ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಆದ್ರೆ ಯಾವುದು ಅನ್ನೋದು ಖಾತ್ರಯಾಗಿಲ್ಲ.. ಆದ್ರೆ ಇದೀಗ ಹರಿದಾಡ್ತಿರುವ ಸುದ್ದಿ ನೋಡಿದ್ರೆ ,, ಇವರಿಬ್ಬರ ಕಾಂಬಿನೇಷನ್ ನಲ್ಲಿ ವಿಕ್ರಾಂತ್ ರೋಣ 2 ಬರಬಹುದು ಎನ್ನಲಾಗ್ತಿದೆ.. ಹಾಗೆ ನೋಡಿದ್ರೆ ಮುಂದೆ ಸುದೀಪ್ ಅವರು ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ನಟಿಸಲಿದ್ದಾರೆ.. ಇನ್ನೂ ಈ ಸಿನಿಮಾ ವಿಕ್ರಾಂತ್ ರೋಣಾಗಿಂತಲೂ ಮುಂಚೆಯೇ ಸೆಟ್ಟೇರಬೇಕಿತ್ತು.. ಆದ್ರೆ ವಿಕ್ರಾಂತ್ ರೋಣ ಮೊದಲು ಶುರುವಾಯಿತು..

 

ಅಂದ್ಹಾಗೆ ಇತ್ತೀಚೆಗೆ ಸುದೀಪ್ ಅವರ ಬಳಿ ನಟ ಪ್ರದೀಪ್ ಅವರು ಮುಂದಿನ ಸಿನಿಮಾದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾ ಯಾವುದು ಅಅಂತ ಹೇಳ್ದೇ , ಸಿನಿಮಾ ಮಾಡೋದಾಗಿ ಟ್ವೀಟ್ ಮಾಡಿದ್ದರು.. ಆ ಬಗ್ಗೆ ಪ್ರಶ್ನಿಸಿರುವ ಪ್ರದೀಪ್ ವಿಕ್ರಾಂತ್ ರೋಣ 2 ಅಥವಾ ಬಿಲ್ಲ ರಂಗ ಬಾಷಾ ನಿಮ್ಮ ಮುಂದಿನ ಸಿನಿಮಾ ಯಾವುದು ಅಂತ ಕೇಳಿದ್ದಾರೆ. ಆದ್ರೆ ಇದಕ್ಕೆ ಸೂಕ್ತ ುತ್ತರ ಸಿಕ್ಕಿಲ್ಲವಾದ್ರೂ ವಿಕ್ರಾಂತ್ ರೋಣ 2 ಬರಬಹುದಾ ಎಂಬ ಕುತೂಹಲ ಹುಟ್ಟಿದೆ..

Tags: #saakshatvcinema hallfilm newsSandalwood
ShareTweetSendShare
Join us on:

Related Posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
February 14, 2026
0

ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram