ಕೊರೊನಾ ವೈರಸ್ ಮಾನವ ಕುಲಕ್ಕೆ ಶಾಪವಾಗಿದೆ. ಜನರಲ್ಲಿ ದಿನ ದಿಂದ ದಿನ ಹೆಚ್ಚು ಆತಂಕ ಸೃಷ್ಟಿ ಮಾಡುತ್ತಿದೆ. ಸೇಮ್ ಟೈಮ್ ಕೊರೊನಾ ಸೋಂಕಿನ ಬಗ್ಗೆ ತಿಳಿವಳಿಕೆಯ ಕೊರತೆ ಸಹ ಉಂಟಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಕ್ವಾರೆಂಟೈನ್ ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು. ಕೊರೊನಾ ಸೋಂಕು ತಗುಲಿದ ಅಥವಾ ಶಂಕೆ ವ್ಯಕ್ತವಾದಗ ಸಹಜವಾಗಿ ಕ್ವಾರೆಂಟೈನ್ ನಲ್ಲಿ ಇಡಲಾಗುತ್ತದೆ. ಯಾಕೆಂದರೆ ಇನ್ನೊಬ್ಬರಿಗೆ ಸೋಂಕು ಹರಡದಂತೆ ತಡೆಯಲು. ಆದರೆ ಕ್ವಾರೆಂಟೈನ್ ಬಗ್ಗೆ ತಿಳಿವಳಿಕೆ ಕೊರತೆಯಿಂದಾಗಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿವೆ.ಕಳೆದ ಕೆಲ ದಿನಗಳ ಹಿಂದೆ ಪತ್ನಿ ಮುಟ್ಟಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕ್ವಾರೆಂಟೈನ್ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಂಧೋಳ ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ತುಕಾರಾಮ ಪವಾರ್ ಎಂಬುವವರು (40) ಕ್ವಾರೆಂಟೈನ್ ಗೆ ಹೆದರಿ ವಿಷ ಸೇವಿಸಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಕಾರಾಮ ಪವಾರ್ ಮೇ 15 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದಿದ್ದರು. ಈತ ಬಂದಿರುವ ವಿಷಯ ತಿಳಿದು ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತಿಯವರು ಮೇ 16 ರಂದು ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಿದ್ದರು. ಕ್ವಾರೆಂಟೈನ್ನಲ್ಲಿರಲು ತುಲಾರಾಮ ನಿರಾಕರಿಸಿದ್ದನು. ಹಾಗಾಗಿ ಕ್ವಾರೆಂಟೈನ್ ಆಗಲಿಲ್ಲ ಎಂದಾದರೆ ಸ್ವಂತ ಊರಿಗೆ ತೆರಳುವಂತೆ ಸಲಹೆ ನೀಡಲಾಗುತ್ತು. ಇದಕ್ಕೆ ಭಯಗೊಂಡ ತುಕಾರಾಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಈ ವ್ಯಕ್ತಿ ಮೂಲತಃ ಯಾದಗಿರಿ ಜಿಲ್ಲೆ ಜುಮಲಾಪುರ ತಾಂಡಾದವರು. ಅಲ್ಲದೆ ಕೋವಿಡ್ 19 ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡೋದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ..








