Mekedatu padayatre | ಕೇಸ್ ಹಾಕ್ಲಿ ನಡೆದುಕೊಂಡೇ ಜೈಲಿಗೆ ಹೋಗ್ತೀವಿ
ಅರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿ ವಾಗ್ದಾಳಿ
ಜೈಲು ಮತ್ತು ಬೇಲು ನಮಗೇನು ಹೊಸದಲ್ಲ
ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಸುದ್ದಿಗೋಷ್ಠಿ
ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು
ಕೇಸ್ ಹಾಕ್ಲಿ ನಡೆದುಕೊಂಡೇ ಜೈಲಿಗೆ ಹೋಗ್ತೀವಿ
ಬೆಂಗಳೂರು : ಜೈಲು ಮತ್ತು ಬೇಲು ನಮಗೇನು ಹೊಸದಲ್ಲ. ಕೇಸ್ ಹಾಕ್ಲಿ ನಡೆದುಕೊಂಡೇ ಜೈಲಿಗೆ ಹೋಗ್ತೀವಿ ಅಂತಾ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇಂದಿನಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ.
ಈ ಹಿನ್ನಲೆಯಲ್ಲಿ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದ ಜನರ ಬದುಕಿಗೆ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.
ಆದ್ರೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದೇವೆ ಅಂತಾ 37 ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಾಗಿದೆ.
ನಾವು ಪಾದಯಾತ್ರೆ ಮಾಡ್ತೀರೋದು ಮುಖ್ಯಮಂತ್ರಿ, ಅಧಿಕಾರಿಗಳಿಗೆ ಗೊತ್ತಿದ್ದೆ. ನಾವು ಅನುಮತಿ ಪಡೆದು ಪಾದಯಾತ್ರೆ ನಡೆಸುತ್ತಿದ್ದೇವೆ.
ಆದ್ರೂ ರಾಜಕೀಯ ದ್ವೇಷದಿಂದ ನಮ್ಮ ಮೇಲೆ ಕೇಸ್ ದಾಖಲು ಮಾಡಲಾಗಿದೆ ಎಂದು ಕಿಡಿಕಾರಿದರು.
ಇನ್ನು ಬೆಂಗಳೂರಿನಲ್ಲಿ ನಮ್ಮ ಬ್ಯಾನರ್ ತೆಗೆಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆಯ ರಸ್ತೆಯಿಂದ ವಿಧಾನಸೌಧದವರೆಗೂ ಇವರ ಬ್ಯಾನರ್ ನೋಡಿದ್ದೇನೆ.
ಮೊನ್ನೆ ಮಿನಿಸ್ಟರ್ ಮತ್ತು ಸಂಸದ ರಾಘವೇಂದ್ರ ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದ್ರು. ಬಜರಂಗದಳದವರು ಬೀದಿಗಿಳಿದು ಪ್ರತಿಭಟಿಸಿದ್ರು.
ಯಾರ ಮೇಲೂ ಕೇಸ್ ಹಾಕಿಲ್ಲ. ನಾವು ಜನರ ಪರ ಹೋರಾಟ ಮಾಡಿದ್ರೆ ಕೇಸ್ ಹಾಕಿದ್ದಾರೆ. ಕೇಸ್ ಹಾಕ್ಲಿ ನಡೆದುಕೊಂಡೇ ಜೈಲಿಗೆ ಹೋಗ್ತೀವಿ ಅಂತಾ ಡಿ.ಕೆ.ಶಿವಕುಮಾರ್ ಗುಡುಗಿದರು.
ಇದೇ ವೇಳೆ ನಾವು ಕೇಸ್ ಗೆ ಹೆದರಲ್ಲ, ನಮ್ಮದು ಗಾಂಧಿ ತತ್ವ ಎಂದ ಡಿಕೆಶಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅನ್ನು ನೀವು ಸಾಯಿಸಬಹುದು.
ಆದ್ರೆ, ನಾನು ಮತ್ತು ಸಿದ್ದರಾಮಯ್ಯ ಅಂಥವರು ನೂರಾರು ಜನ ಹುಟ್ಟುತ್ತಾರೆ ಎಂದರು. DK shivakumar says aaraga jnanedra is useless due to FIR against mekedatu paadayaatre









