RCB ಕ್ಯಾಪ್ಟನ್ ಘೋಷಣೆ ವಿಳಂಬ ಯಾಕೆ..?
ಐಪಿಎಲ್ 15ನೇ ಸೀಸನ್ ಗೆ ಇನ್ನು 25 ದಿನಗಳು ಮಾತ್ರ ಬಾಕಿ ಉಳಿದಿವೆ. ಮಾರ್ಚ್ 26 ರಂದು ಪ್ರಾರಂಭವಾಗುವ ಸೀಸನ್ ಮೇ 29 ರವರೆಗೆ ನಡೆಯುತ್ತದೆ.
ಆದ್ರೆ ತಂಡದ ನಾಯಕ ಯಾರು ಎಂಬುದನ್ನು ಆರ್‌ಸಿಬಿ ಫ್ರಾಂಚೈಸಿ ಇನ್ನೂ ಪ್ರಕಟಿಸಿಲ್ಲ. ಈಗಾಗಲೇ ಎಲ್ಲಾ ತಂಡಗಳು ತಮ್ಮ ನಾಯಕ ಯಾರೆಂದು ಬಹುತೇಕ ಘೋಷಿಸಿವೆ.
ಐಪಿಎಲ್ 2021 ಸೀಸನ್ ವೇಳೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಅಂದಿನಿಂದ RCB ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ.
ಮೆಗಾಹಜಾರಿಗೂ ಮುನ್ನ ಆರ್‌ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಕೊಹ್ಲಿ ಅವರನ್ನ ಉಳಿಸಿಕೊಂಡಿತ್ತು.
ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಗ್ಲೇನ್ ಮ್ಯಾಕ್ಸ್ ವೆಲ್, ಆರ್‌ಸಿಬಿ ನಾಯಕನಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.
ಆದ್ರೆ ಫ್ರಾಂಚೈಸಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ. ನಂತರದ ಮೆಗಾ ಹರಾಜಿನಲ್ಲಿ RCB ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರನ್ನು ಖರೀದಿಸಿತು.
ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಈ ಹಿಂದೆ ನಾಯಕರಾಗಿ ಅನುಭವ ಹೊಂದಿದ್ದಾರೆ. ಇದರೊಂದಿಗೆ, ಇಬ್ಬರಲ್ಲಿ ಒಬ್ಬರನ್ನು ಆರ್‌ಸಿಬಿ ನಾಯಕರನ್ನಾಗಿ ಮಾಡುತ್ತದೆ ಎಂದು ಚರ್ಚೆ ನಡೆಯುತ್ತಿದೆ.
ಆದ್ರೆ ಈ ಇಬ್ಬರ ಬಗ್ಗೆಯೂ ಫ್ರಾಂಚೈಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ತೆಗೆದುಕೊಂಡಿದ್ದರೇ ಇಷ್ಟೋತ್ತಿಗಾಗಲೇ ನಾಯಕನ ಘೋಷಣೆ ಆಗಬೇಕಿತ್ತು.
ಇನ್ನು ಮ್ಯಾಕ್ಸ್ ವೆಲ್ ಟೂರ್ನಿಯ ಕೆಲ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಮ್ಯಾಕ್ಸಿ ನಾಯಕತ್ವದ ರೇಸ್ ನಿಂದ ಹೊರಬಿದ್ದಂತೆ. ಕಾರ್ತಿಕ್ ಅಥವಾ ಡುಪ್ಲೆಸಿಸ್ ಆರ್‌ಸಿಬಿ ನಾಯಕರಾಗುವ ಸಾಧ್ಯತೆ ಹೆಚ್ಚಿದೆ.
why-rcb-delaying-announcing-rcb-captain