ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ ಝೈನ್ ವಿಧಿವಶ…
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಾದೆಲ್ಲಾ (26) ಭಾನುವಾರ ನಿಧನರಾದರು ಎಂದು ಮೈಕ್ರೋಸಾಫ್ಟ್ ಅಧಿಕೃತ ಪ್ರಕಟಣೆಯಲ್ಲಿ, ತಿಳಿಸಿದೆ.
26ರ ಹರೆಯದ ಝೈನ್ ನಾದೆಲ್ಲ ಅವರಿಗೆ ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೈಕ್ರೋಸಾಫ್ಟ್ ಸಂತಾಪದ ಸಂದೇಶವನ್ನು ಕಳುಹಿಸಿದ್ದು, ತಮ್ಮ ಮಗನನ್ನು ಕಳೆದುಕೊಂಡ ದುಃಖಕ್ಕೆ ತನ್ನ ಕುಟುಂಬಕ್ಕೆ ಸ್ವಲ್ಪ ಸಮಯವನ್ನು ನೀಡುವಂತೆ ಏಜೆನ್ಸಿಗೆ ತಿಳಿಸಿದೆ.
2014 ರಿಂದ ಸಿಇಒ ಆಗಿ ನೇಮಕಗೊಂಡಾಗಿನಿಂದಲೂ ಮೈಕ್ರೋಸಾಫ್ಟ್ ನ ಉತ್ಪನ್ನಗಳನ್ನು ಉತ್ತಮಗೊಳಿಸುವತ್ತ ನಾದೆಳ್ಲಾ ಮಹತ್ವದ ಹೆಜ್ಜೆಗಳನ್ನಿರಿಸಿದ್ದರು. ಅಷ್ಟೇ ಅಲ್ಲದೇ ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಉತ್ತಮ ಸೇವೆಗಳನ್ನು ಒದಗಿಸುವತ್ತ ಗಮನ ಕೇಂದ್ರೀಕರಿಸಿದ್ದ ನಾದೆಳ್ಲ, ತಮ್ಮ ಮಗನಿಂದ ಹಲವು ಅಂಶಗಳನ್ನು ಕಲಿತಿದ್ದಾಗಿ ಹೇಳಿದ್ದರು.
ಝೈನ್ ಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇತ್ತು, ಆತನ ಪ್ರಕಾಶಮಾನವಾದ ನಗುಮೊಗದ ಮೂಲಕ ಎಲ್ಲರ ಸ್ಮೃತಿಯಲ್ಲಿ ಉಳಿಯಲಿದ್ದಾನೆ ಎಂದು ಚಿಲ್ಡ್ರನ್ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರ್ರಿಂಗ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉಕ್ರೇನ್ – ರಷ್ಯಾ ಬಿಕ್ಕಟ್ಟು : ಯುದ್ಧದ 6 ನೇ ದಿನದ ಅಪ್ಡೇಟ್ ಇಲ್ಲಿದೆ….