Hyderabad | ಬಿಜೆಪಿ ಮಾಜಿ ಸಂಸದರ ಆಪ್ತರ ಅಪಹರಣ
ಮಾಜಿ ಸಂಸದ ಎಪಿ ಜಿತೇಂದ್ರ ರೆಡ್ಡಿ ಆಪ್ತರ ಅಪಹರಣ
ಹೈದರಾಬಾದ್ ನಲ್ಲಿ ಸೋಮವಾರ ನಡೆದಿರುವ ಘಟನೆ
ಕಿಡ್ನಾಪ್ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆ
ಸೌತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೈದರಾಬಾದ್ : ಬಿಜೆಪಿ ಮಾಜಿ ಸಂಸದ ಎಪಿ ಜಿತೇಂದ್ರ ರೆಡ್ಡಿ ಅವರ ಮನೆಯಿಂದ ಅಪರಿಚಿತ ವ್ಯಕ್ತಿಗಳು ನಾಲ್ವರು ಖಾಸಗಿ ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಕಿಡ್ನಾಪ್ ಮಾಡುತ್ತಿರುವ ದೃಶ್ಯವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಇನ್ನು ಈ ಬಗ್ಗೆ ಮಾತನಾಡಿರುವ ಜಿತೇಂದ್ರ ರೆಡ್ಡಿ, ಕಿಡ್ನಾಪ್ ವಿಚಾರದಲ್ಲಿ ನನಗೆ ಯಾರ ಮೇಲೂ ಅನುಮಾನ ಇಲ್ಲ. ಘಟನೆ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿಲಾಗಿದೆ. ಅವರು ತನಿಖೆ ಶುರು ಮಾಡಿದ್ದಾರೆ.
ಕಿಡ್ನಾಪ್ ಆದವರನ್ನು ಕಾರು ಚಾಲಕ ಥಾಪಾ ಮತ್ತು ಮಹೆಬೂಬ್‌ನಗರದ ಮುನ್ನೂರು ರವಿ ಎಂದು ಹೇಳಲಾಗುತ್ತಿದೆ. ಇವರು ಜಿತೇಂದ್ರ ರೆಡ್ಡಿ ಅವರ ಬಳಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಈ ಘಟನೆಯ ಸಂಬಂಧ ಸೌತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former BJP MP alleges 4 known to him kidnapped in hyderabad









