Ukraine : ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್ – ರಷ್ಯಾ ಯುದ್ಧಾಪರಾಧಗಳ ಪ್ರಕರಣದ ತನಿಖೆ
ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಿಂದ ಉಕ್ರೇನ್ ನಲ್ಲಿ ರಕ್ತ ಸಿಕ್ತ ವಾತಾವರಣ ನಿರ್ಮಾಣವಾಗಿದೆ. ಉಕ್ರೇನ್ ಪರಿಸ್ಥಿತಿ ಭೀಭತ್ಸವಾಗಿದೆ.. ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯದ ಭಯಾನಕ ವಿಡಿಯೋ ಫೋಟೋಗಳು ಹರಿದಾಡ್ತಿವೆ.. ಬಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು , ಅವರ ಪರಿಸ್ಥಿತಿಯೂ ಶೋಚನೀಯವಾಗಿದೆ.. ಈಗಾಗಲೇ ಭಾರತದ ಇಬ್ಬರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅದ್ರಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಕೂಡ ಒಬ್ಬರು..
ಈ ನಡುವೆ ಉಕ್ರೇನ್ ನಲ್ಲಿ ಯುದ್ಧಾಪರಾಧಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ತಕ್ಷಣ ತನಿಖೆ ಆರಂಭಿಸುವುದಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಕರೀಂ ಖಾನ್ ತಿಳಿಸಿದ್ದಾರೆ. ಯೂರೋಪ್ ಒಕ್ಕೂಟ ರಾಷ್ಟ್ರಗಳು ಸೇರಿದಂತೆ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ನ್ಯೂಜಿಲೆಂಡ್, ಸ್ವಿಟ್ಜರ್ಲೆಂಡ್ ಮತ್ತು ಹಲವು ಲ್ಯಾಟಿನ್ ಅಮೆರಿಕ ರಾಷ್ಟ್ರಗಳು ಸೇರಿ ಒಟ್ಟು 39 ರಾಷ್ಟ್ರಗಳ ಬೆಂಬಲವನ್ನು ಕರೀಂ ಖಾನ್ ಕಚೇರಿ ಸ್ವೀಕರಿಸಿದೆ. ಯುದ್ಧ ಪೀಡಿತ ಉಕ್ರೇನ್ ನಲ್ಲಿನ ಪರಿಸ್ಥಿತಿಯ ಕುರಿತಾಗಿ ತನಿಖೆ ಆರಂಭಿಸುವ ಬಗ್ಗೆ ಐಸಿಸಿಗೆ ಸೂಚನೆ ನೀಡಿದ್ದೇನೆ. ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆಗಿರುವ ಕರೀಂ ಖಾನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.








