IPL 2022 – RCB ನಾಯಕನ ಘೋಷಣೆ ಯಾವಾಗ ???
15 ನೇ ಆವೃತ್ತಿಯ ಐ ಪಿ ಎಲ್ ಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ ಕೆಲವೇ ಎಲ್ಲಾ ತಂಡಗಳು ತಮ್ಮ ನಾಯಕನ ಸಾರಥ್ಯದಲ್ಲಿ ಸಿದ್ಧತೆಯನ್ನ ಆರಂಭಿಸಿವೆ, ಆದರೆ RCB ತಂಡದ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯೆಂದರೇ ಅದು ಆರ್ ಸಿ ಬಿ ತಂಡದ ಮುಂದಿನ ನಾಯಕ ಯಾರು ? ಎನ್ನವುದು.
14 ನೇ ಆವೃತ್ತಿ ಅರ್ಧದ ಚರಣದಿಂದ ವಿರಾಟ್ ಕೋಹ್ಲಿ ಧಿಡೀರ್ ಅಂತ ಐಪಿಎಲ್ ಟಿ 20 ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದರು. ಆಗಿನಿಂದ ಮುಂದಿನ ಟೂರ್ನಿಗೆ ಯಾರು ನಾಯಕನಾಗುತ್ತಾರೆ ಎನ್ನವುದು ಅಭಿಮಾನಿಗಳಿಗೆ ಕಾಡುತ್ತಿದೆ, ಇದಕ್ಕೆ ಉತ್ತರ IPL ಮೆಗಾ ಹರಾಜಿನಲ್ಲಿ ಸಿಗಬಹುದು ಎಂದು ಆರ್ ಸಿ ಬಿ ಫ್ಯಾನ್ಸ್ ಕಾದಿದ್ದರು ಆದರೆ ಇಲ್ಲಿಯೂ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ಸದ್ಯ ಆರ್ ಸಿ ಬಿ ಪಟ್ಟಕ್ಕೆ ಮ್ಯಾಕ್ಸ್ ವೆಲ್ ಫ್ಲಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತೀಕ್ ಹೆಸರು ಕೇಳಿಬರುತ್ತಿದೆ. ಮ್ಯಾಕ್ಸ್ ವೆಲ್ ಮದುವೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಮೊದಲ ಕೆಲ ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆ ಇದೆ. ಕೆ ಕೆ ಆರ್ ತಂಡವನ್ನ ಮನ್ನೆಡೆಸಿ ಅನುಭವ ಹೊಂದಿರುವ ದಿನೇಶ್ ಕಾರ್ತೀಕ್ ಹೆಸರೂ ಬಲವಾಗಿ ಕೆಳಿಬರುತ್ತಿದೆ. ಫ್ಲಾಫ್ ಡುಫ್ಲೆಸಿಸ್ ಟಿ 20 ಫಾರ್ಮೇಟ್ ಗೆ ಹೇಳಿ ಮಾಡಿಸಿದಂತಹ ಆಟಗಾರ ಹಾಗಾಗಿ ಇವರು ಕ್ಯಾಪ್ಟೆನ್ಸಿಗೇರುವ ಸಾಧ್ಯತೆ ಹೆಚ್ಚಾಗಿದೆ.
ಐಪಿಎಲ್ ಪಂದ್ಯಾವಳಿಯ ಪೂರ್ತಿ ವೇಳಾಪಟ್ಟಿ ಬಿಡುಗಡೆಯಾದ ನಂತರ ಆರ್ ಸಿ ಬಿ ಕ್ಯಾಪ್ಟನ್ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ…








