Virat Kohli ಶ್ರೇಷ್ಠ ಆಟಗಾರ, ಸೆಂಚೂರಿ ಬಾರಿಸಬೇಕು..
ಏಪ್ರಿಲ್ 4 ರಿಂದ ಮೊಹಾಲಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಕೊಹ್ಲಿ ವೃತ್ತಿಜೀವನದ 100 ನೇ ಟೆಸ್ಟ್ ಆಗಿರಲಿದೆ. ಹೀಗಾಗಿ ಈ ಪಂದ್ಯಕ್ಕೆ ಹಾಜರಾಗುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ.
ಲಂಡರ್ ನಲ್ಲಿ ಮಾತನಾಡಿರುವ ಗಂಗೂಲಿ, ಈಗಿನ ಪೀಳಿಗೆಯಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡುವುದು ಸುಲಭವಲ್ಲ.
ಭಾರತೀಯ ಕ್ರಿಕೆಟ್ ನಲ್ಲಿ ಕೆಲವೇ ಕೆಲವು ಜನರು ಈ ಸಾಧನೆ ಮಾಡಿದ್ದಾರೆ. 100ನೇ ಟೆಸ್ಟ್ ಮೈಲುಗಲ್ಲು ತಲುಪಲು, ಶ್ರೇಷ್ಠ ಆಟಗಾರನಾಗಿರಬೇಕು.
ಕೊಹ್ಲಿ ಅವರು ಆ ವರ್ಗಕ್ಕೆ ಸೇರುತ್ತಾರೆ ಎಂದು ವಿರಾಟ್ ಕೊಹ್ಲಿ ಅವರನ್ನ ಸೌರವ್ ಹೊಗಳಿದ್ದಾರೆ.
ಕೆಲ ದಿನಗಳಿಂದ ವಿರಾಟ್ ಕೊಹ್ಲಿ ಫಾರ್ಮ್ ಕೊರತೆ ಕಂಗೆಟ್ಟಿರುವುದು ನಿಜ, ಆದ್ರೆ ಮೊಹಾಲಿ ಟೆಸ್ಟ್ ನಲ್ಲಿ ಕೊಹ್ಲಿ ಶತಕದ ದಾಹ ತೀರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದ ವೇಳೆ ಕೊಹ್ಲಿ ಫಾರ್ಮ್ ಕಳೆದುಕೊಂಡು ಕೆಲ ದಿನಗಳ ನಂತರ ಗೋಡೆಗೆ ಬಡಿದ ಚೆಂಡಿನಂತೆ ಮರಳಿದ್ದನ್ನು ನಾವು ನೋಡಿದ್ದೇವೆ.
ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ 2002-2005ರ ನಡುವೆ ಬ್ಯಾಡ್ ಪಾರ್ಮ್ ನಲ್ಲಿದ್ದರು.
ಆದ್ರೆ ಅಂದಿನಿಂದ ದ್ರಾವಿಡ್ ಮತ್ತಷ್ಟು ಸ್ಟ್ರಾಂಗ್ ಆಗಿ ವಾಪಸ್ ಆದರು. ಶ್ರೇಷ್ಠ ಆಟಗಾರದ ವೃತ್ತಿ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದಿದ್ದಾರೆ ಸೌರವ್ ಗಂಗೂಲಿ. sourav-ganguly-makes-huge-prediction-about virat