ಬೆಂಗಳೂರು : ಬಾಡಿಗೆ ಮನೆಯಿಂದ ಬಿಟ್ಟು ಕಳಿಸಿದ್ದಕ್ಕೆ ಓನರ್ ಮೇಲೆ ಆಫ್ರಿಕನ್ ಪ್ರಜೆ ಹಲ್ಲೆ ನಡೆಸಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದುಬ್ಸಿ ನಥನ್ನಾಲ್ ದುಮ್ ಎಂಬ ಆಫ್ರಿಕನ್ ಪ್ರಜೆ ಗಲಾಟೆ ಮಾಡಿರುವ ಆರೋಪ ಕೇಳಿಬಂದಿದೆ. ರಂಜಿತ್ ಎಂಬುವರು ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..
ರಂಜಿತ್ ಮನೆಯಲ್ಲಿ ಕೆಲ ತಿಂಗಳುಗಳಿಂದ ಬಾಡಿಗೆಗೆ ಇದ್ದ ವಿದೇಶಿ ದುಬ್ಸಿ ನಥಾನ್ನಾಲ್ ಹಲ್ಲೆ ನೆಡಿಸಿರೋ ಆರೋಪ ಕೇಳಿಬಂದಿದೆ..
ಆದ್ರೆ ಇತ್ತೀಚೆಗೆ ಕಾರಣಾಂತರಗಳಿಂದ ಮನೆ ಮಾಲೀಕರು ಬಾಡಿಗೆ ಮನೆಯಿಂದ ಹೊರ ಕಳಿಸಿದ್ದರು.. ಫೆ. 19 ರಂದು ಮನೆಗೆ ಬಂದು ನನ್ನ ವಸ್ತುಗಳನ್ನ ಕೊಡಿ ಎಂದು ಕಿರಿಕ್ ತೆಗೆದಿದ್ದಾನೆ ಎನ್ನಲಾಗಿದೆ..
ಈ ವೇಳೆ ಪ್ರಶ್ನೆ ಮಾಡಲು ಹೋದ ಮನೆ ಮಾಲೀಕರ ಮೇಲೆ ಹಲ್ಲೆ ಮಾಡಿಇರೋದಾಗಿ ತಿಳಿದುಬಂದಿದೆ.
ವಿದೇಶಿ ಪ್ರಜೆ ದುಬ್ಸಿ ನಥಾನ್ನಲ್ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಮನೆ ಮಾಲೀಕರು ದೂರು ಸಲ್ಲಿಸಿದ್ದಾರೆ.. ಸದ್ಯ ಆರೋಪಿ ನಥಾನ್ನಲ್ ನನ್ನ ವಶಪಡೆದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.








