ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾನಂತೂ ಕುಂಬ್ಳೆಗೆ ವಿಕೆಟ್ ಒಪ್ಪಿಸಲ್ಲ… ಕೊನೆಗೂ ಕುಂಬ್ಳೆಗೆ ಬಲಿಯಾದೆ…. ಆ ದಿನವನ್ನು ನೆನಪಿಸಿಕೊಂಡ ವಾಸೀಮ್ ಅಕ್ರಂ.

admin by admin
May 23, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಹೌದು, ಇಂತಹದ್ದೊಂದು ಸಾಧನೆ ಕಳೆದ ಎರಡು ಮೂರು ದಶಕಗಳಲ್ಲಿ ಮೂಡಿ ಬಂದಿಲ್ಲ. ವಿಶ್ವ ಕ್ರಿಕೆಟ್ ನಲ್ಲಿ ಅದೆಷ್ಟೋ ದಾಖಲೆಗಳು ಆಗಿವೆ. ಅದೆಷ್ಟೋ ದಾಖಲೆಗಳು ಮರೆಯಾಗಿ ಹೊಗಿವೆ. ಅದೆಷ್ಟೋ ದಾಖಲೆ ಮಾಡಿದ ಕ್ರಿಕೆಟಿಗರು ತೆರೆಮರೆಗೆ ಸರಿದಿದ್ದಾರೆ. ಅದೆಷ್ಟೋ ಯುವ ಕ್ರಿಕೆಟಿಗರು ಅಪ್ರತಿಮ ಸಾಧನೆ ಮಾಡಿದ್ದಾರೆ. ಆದ್ರೆ ಆ ಒಂದು ಸಾಧನೆ, ಆ ಒಂದು ದಾಖಲೆಯನ್ನು ಇಂದಿಗೂ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಅಷ್ಟಕ್ಕೂ ಆ ಒಂದು ಸಾಧನೆ, ದಾಖಲೆಯಾಗಿದ್ದು ವಿಶ್ವಕ್ರಿಕೆಟ್ ನಲ್ಲಿ ಕೇವಲ ಎರಡನೇ ಬಾರಿ ಮಾತ್ರ.

ಅಷ್ಟಕ್ಕೂ ಆ ದಾಖಲೆ ಯಾವುದು ಗೊತ್ತಾ? ಒಂದೇ ಇನ್ಸಿಂಗ್ಸ್ ನಲ್ಲಿ ಎದುರಾಳಿ ತಂಡದ ಹತ್ತೂ ವಿಕೆಟ್ ಪಡೆದ ಬೌಲರ್ ಯಾರ್ಯಾರು.. ? ಕ್ರಿಕೆಟ್ ಚರಿತ್ರೆಯಲ್ಲೇ ದಾಖಲಾಗಿದ್ದು ಆ ಎರಡನೇ ಹೆಸರು. ಒಂದು ಇಂಗ್ಲೆಂಡ್‍ನ ಜಿಮ್ ಲೇಕರ್, ಮತ್ತೊಂದು ಭಾರತದ ಅನಿಲ್ ಕುಂಬ್ಳೆ. ಜೀಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ 54ಕ್ಕೆ 10 ವಿಕೆಟ್ ಉರುಳಿಸಿದ್ರೆ, ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧ 74ಕ್ಕೆ 10 ವಿಕೆಟ್ ಕಬಳಿಸಿರುವುದು.   ಒಂದು ದಾಖಲೆ 33 ವರ್ಷಗಳ ನಂತ್ರ ಸಮಗೊಳಿಸಿದ್ರೆ, ಇನ್ನೊಂದು ದಾಖಲೆ 21 ವರ್ಷಗಳಾದ್ರೂ ಯಾರಿಂದಲೂ ಈ ಸಾಲಿಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಿಲ್ಲ. ಅಂತಹ ದಾಖಲೆಗಳಿಗೆ ಸಾಕ್ಷಿಯಾಗಿರುವ ಅಂಗಣಗಳು ಅಂದ್ರೆ ಒಂದು ಓಲ್ಡ್ ಟ್ರಾಫೋರ್ಡ್ ಮತ್ತು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ.

Related posts

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

April 4, 2026
ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

April 3, 2026

ಇದೀಗ ಲಾಕ್ ಡೌನ್ ಟೈಮ್ ನಲ್ಲಿ ಅಂದಿನ ಪಾಕ್ ನಾಯಕ ಅನಿಲ್ ಕುಂಬ್ಳೆಯ ಆ ಮಹೋನ್ನತ ಸಾಧನೆಯನ್ನು ನೆನಪಿಸಿಕೊಂಡಿದ್ದಾರೆ. ವಾಸೀಮ್ ಅಕ್ರಮ್‍ಗೆ ಈ ಪಂದ್ಯ ಮರೆಯಲಾಗದ ಪಂದ್ಯವಾಗಿದೆ. ಯಾಕಂದ್ರೆ ಒಂದು ಪಾಕ್ ತಂಡದ ನಾಯಕ. ಮತ್ತೊಂದು ತನ್ನ ತಂಡದ ಬ್ಯಾಟ್ಸ್ ಮೆನ್‍ಗಳು ಕುಂಬ್ಳೆಗೆ ಯಾವ ರೀತಿ ವಿಕೆಟ್ ಒಪ್ಪಿಸಿದ್ರು ಎಂಬುದನ್ನು ಕಣ್ಣಾರೆ ನೋಡಿದವರು. ಅಷ್ಟು ಮಾತ್ರವಲ್ಲ. ಹತ್ತನೇಯವರಾಗಿ ವಿಕೆಟ್ ಒಪ್ಪಿಸಿದ್ದು ಕೂಡ ವಾಸೀಮ್ ಅಕ್ರಂ ಅವ್ರೇ. ಕುಂಬ್ಳೆಗೆ ವಿಕೆಟ್ ಒಪ್ಪಿಸಲೇಬಾರದು ಅಂತ ಜಿದ್ದಿಗೆ ಬಿದ್ದಿದ್ದ ವಾಸೀಮ್ ಅಕ್ರಮ್ ಅವರನ್ನು ಯಾವ ರೀತಿ ಔಟ್ ಮಾಡಿದ್ರು ಎಂಬುದನ್ನು ಕೂಡ ಅಕ್ರಂ ಮೆಲುಕು ಹಾಕಿಕೊಂಡಿದ್ದಾರೆ.

ಹಾಗೇ ನೋಡಿದ್ರೆ ಆ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲೇ ಇತ್ತು. ಅದು ಪಂದ್ಯದ ನಾಲ್ಕನೇ ದಿನ. ಪಾಕ್‍ಗೆ ಗೆಲ್ಲಲು 420 ರನ್‍ಗಳ ಸವಾಲಿತ್ತು. ಆರಂಭಿಕರಾದ ಶಾಹೀದ್ ಆಫ್ರಿದಿ ಮತ್ತು ಸಯ್ಯದ್ ಅನ್ವರ್ ಶತಕದ (101) ಜೊತೆಯಾಟವನ್ನು ಆಡಿದ್ದರು. ಅಲ್ಲದೆ ಆಫ್ರಿದಿ ಮತ್ತು ಅನ್ವರ್ ಭಾರತದ ವಿರುದ್ಧ ಬಿರುಸಿನ ಆಟವನ್ನೇ ಆಡಿದ್ದರು. ಅನ್ವರ್ ಹಾಗೂ ಆಫ್ರಿದಿ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗಲೇ ಕುಂಬ್ಳೆಯವರ ಮ್ಯಾಜಿಕ್ ಎಸೆತಗಳು ಪಾಕ್ ಅಬ್ಬರಕ್ಕೆ ಕಡಿವಾಣ ಹಾಕಲು ಶುರು ಮಾಡಿದ್ದವು. ಆಗ ಕುಂಬ್ಳೆ ಮನಸ್ಸಿನಲ್ಲಿ ನಾನು ಹತ್ತೂ ವಿಕೆಟ್‍ಗಳನ್ನು ಪಡೆಯುತ್ತೇನೆ ಅನ್ನೋ ಸಣ್ಣ ಸುಳಿವು, ಆಸೆಯೂ ಇರಲಿಲ್ಲ.
ಆದ್ರೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕುಂಬ್ಳೆ ಜಾದು ಮಾಡಲು ಶುರು ಮಾಡಿದ್ದರು. ಆಫ್ರಿದಿಯವರನ್ನು ಮೊದಲನೇ ಬಲಿ ಪಡೆದ ಕುಂಬ್ಳೆ, ಇಜಾಜ್ ಅಹಮ್ಮದ್ ಅವರನ್ನು ಮೊದಲ ಎಸೆತದಲ್ಲೇ ಶೂನ್ಯ ಸುತ್ತುವಂತೆ ಮಾಡಿದ್ದರು. ಆ ನಂತರ ಇಂಜಮಮ್ ಉಲ್ ಹಕ್ (6), ಮಹಮ್ಮದ್ ಯೂಸುಫ್ (0), ಮೋಯಿನ್ ಖಾನ್ (3), ಆರಂಭಿಕ ಸಯ್ಯದ್ ಅನ್ವರ್ (69), ಸಲೀಮ್ ಮಲ್ಲಿಕ್ (15) ಮಸ್ತಾಕ್ ಅಹಮ್ಮದ್ (1), ಸಕ್ಲೇನ್ ಮುಷ್ತಾಕ್ (0) ಹೀಗೆ ದೂರವಾಣಿ ನಂಬರ್‍ನಂತೆ ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು.

ಆದ್ರೆ ನಾಯಕ ವಾಸೀಮ್ ಅಕ್ರಮ್ ಮಾತ್ರ ನೆಲಕಚ್ಚಿ ನಿಂತು ಆಡುತ್ತಿದ್ದರು. ಅಕ್ರಮ್ ಅಂತಿಮ ವಿಕೆಟ್‍ಗೆ ವಕಾರ್ ಯೂನಸ್ ಜೊತೆ ಬ್ಯಾಟಿಂಗ್ ಮಾಡುತ್ತಿದ್ದರು. ವಾಸೀಮ್ ಅಕ್ರಮ್ ಗೆ ಸೋಲು ಖಚಿತ ಗೊತ್ತಿತ್ತು. ಆದ್ರೆ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸಬಾರದು ಅಂತ ಜಿದ್ದಿನಿಂದಲೇ ಆಡುತ್ತಿದ್ದರು. ಆಗ ಭಾರತ ತಂಡದ ಪಾಳೆಯದಲ್ಲಿ ಕುಂಬ್ಳೆಗೆ ಹತ್ತೂ ವಿಕೆಟ್ ಸಿಗಬೇಕು ಅನ್ನೋ ಆಶಾವಾದವನ್ನು ಹೊಂದಿದ್ದರು. ಹತ್ತೂ ವಿಕೆಟ್ ಪಡೆದ್ರೆ ಅದೊಂದು ಐತಿಹಾಸಿಕ ಸಾಧನೆಯಾಗುತ್ತೆ ಅನ್ನೋ ಖುಷಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರಲ್ಲಿತ್ತು.

ಆದ್ರೆ ವಾಕರ್ ಗೇಮ್ ಪ್ಲಾನ್ ಬೇರೆಯದ್ದೇ ಆಗಿತ್ತು. ವಾಸೀಮ್ ಅಕ್ರಮ್ ವಿಕೆಟ್ ಒಪ್ಪಿಸುವುದಕ್ಕೆ ಮುನ್ನ ಏನು ಹೇಳಿದ್ದರು ಎಂಬುದನ್ನು ಅವರೇ ಈಗ ಹೇಳಿಕೊಂಡಿದ್ದಾರೆ. ನಾನು ವಕಾರ್ ಯೂನಸ್‍ಗೆ ಹೇಳಿದ್ದೆ. ನೀನು ನಿನ್ನ ನೈಜ ಆಟವನ್ನು ಆಡು ಅಂತ. ನಾನಂತೂ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ. ಶ್ರೀನಾಥ್‍ಗೆ ಟಾರ್ಗೆಟ್ ಮಾಡ್ಕೊಂಡು ಆಡು ಅಂತ ಒಬ್ಬ ನಾಯಕನಾಗಿ ನಾನು ಯೂನಸ್‍ಗೆ ಆಗ ಹೇಳಿದ್ದೆ.ನಂತರ ಕುಂಬ್ಳೆ ಓವರ್‍ನ ಮೊದಲ ಎಸೆತ. ಇನ್‍ಸೈಡ್ ಎಡ್ಜ್ ಆಗಿ ಚೆಂಡು ಲಕ್ಷ್ಮಣ್ ಕೈ ಸೇರಿತ್ತು. ಹೀಗೆ ಕುಂಬ್ಳೆ ಇನಿಂಗ್ಸ್‍ನ ಹತ್ತೂ ವಿಕೆಟ್‍ಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು. ನನ್ನ ಪ್ಲಾನ್ ವರ್ಕ್ ಔಟ್ ಆಗಲಿಲ್ಲ ಎಂದು ವಾಸೀಮ್ ಅಕ್ರಂ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Tags: Anil Kumble
ShareTweetSendShare
Join us on:

Related Posts

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 4, 2026
0

ದಿನ ಭವಿಷ್ಯ: 04-04-2026 1. ಮೇಷ ರಾಶಿ ಇಂದಿನ ದಿನ ನಿಮಗೆ ಉತ್ಸಾಹದಿಂದ ಕೂಡಿರುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸಕಾಲ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ...

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ

by Shwetha
April 3, 2026
0

ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...

ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ : ನಾನು ನಾಸ್ತಿಕನಿರಬಹುದು ಆದರೆ ನನ್ನ ತಾಯಿಯ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು ಟೀಕಿಸಿದ ವಿಕೃತ ಮನಸ್ಸುಗಳಿಗೆ ಪ್ರಕಾಶ್ ರಾಜ್ ಖಡಕ್ ತಿರುಗೇಟು

by Shwetha
April 3, 2026
0

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸದ್ಯ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೆ, ಈ ಸೂತಕದ ಮನೆಯಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆಗಳನ್ನು ಮಾಡುತ್ತಿರುವುದು ವಿವಾದಕ್ಕೆ...

ಶಾಂತಿ ದಲ್ಲಾಳಿಯಾಗಲು ಹೊರಟ ಪಾಕಿಸ್ತಾನಕ್ಕೆ ಕತಾರ್‌ನಿಂದ ತೀವ್ರ ಮುಖಭಂಗ: ಉಗ್ರರ ನಾಡಿಗೆ ವೀಸಾ ಬ್ಯಾನ್ ಭಾರತಕ್ಕೆ ರಾಜಮರ್ಯಾದೆ

ಶಾಂತಿ ದಲ್ಲಾಳಿಯಾಗಲು ಹೊರಟ ಪಾಕಿಸ್ತಾನಕ್ಕೆ ಕತಾರ್‌ನಿಂದ ತೀವ್ರ ಮುಖಭಂಗ: ಉಗ್ರರ ನಾಡಿಗೆ ವೀಸಾ ಬ್ಯಾನ್ ಭಾರತಕ್ಕೆ ರಾಜಮರ್ಯಾದೆ

by Shwetha
April 3, 2026
0

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಮುಖಭಂಗವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಉದ್ವಿಗ್ನತೆಯ ನಡುವೆ ಶಾಂತಿ ದಲ್ಲಾಳಿಯಂತೆ ವರ್ತಿಸಲು ಮುಂದಾದ ಪಾಕಿಸ್ತಾನಕ್ಕೆ ಪಶ್ಚಿಮ ಏಷ್ಯಾದ ಪ್ರಬಲ ರಾಷ್ಟ್ರ...

ಪೊಲೀಸರು 24 ಗಂಟೆಯೂ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

ಪೊಲೀಸರು 24 ಗಂಟೆಯೂ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

by Shwetha
April 3, 2026
0

ರಾಜ್ಯದಲ್ಲಿ ಸೈಬರ್ ಅಪರಾಧ ಸೇರಿದಂತೆ ಹಲವು ರೀತಿಯ ಅಪರಾಧಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ, ಅವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಪೊಲೀಸರನ್ನು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕೋರಮಂಗಲದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram