ಬೆಂಗಳೂರು : ಲಾಕ್ ಡೌನ್ ಸಮಯದಲ್ಲಿ ದೇಶವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅಲ್ಲದೆ ಬೇರೆ ಖಾಸಗಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿವೆ. ಇದರಿಂದ ಸಾಕಷ್ಟು ಜನರಲ್ಲಿ ಆತಂಕ ಹೆಚ್ಚಾಗಿತ್ತು. ಜೊತೆಗೆ ಸಂಸಾರ ಹೇಗೆ ನಿಭಾಯಿಸಬೇಕು ಎಂಬ ಚಿಂತೆಯಲ್ಲಿದ್ದರು. ಆದರೆ ಅಮೇಜಾನ್ ಅನ್ ಲೈನ್ ಶಾಪಿಂಗ್ ಕಂಪನಿ 50 ಸಾವಿರ ಉದ್ಯೋಗಿಗಳ ಬೇಕು ಎಂದು ಹೇಳಿದೆ.
ಅಮೇಜಾನ್ ಭಾರತದ ಅತೀ ದೊಡ್ಡ ಅನ್ ಲೈನ್ ಶಾಪಿಂಗ್ ಸಂಸ್ಥೆ. ಇದೀಗ ಈ ಸಂಸ್ಥೆ 50 ಸಾವಿರ ಜನ ಕೆಲಸಕ್ಕೆ ಬೇಕು ಎಂದು ಹೇಳಿದೆ. ಗ್ರಾಹಕರು ಕೇಳಿದ ವಸ್ತುಗಳನ್ನು ಮನೆಗೆ ತಲುಪಿಸುವ ಕೆಲಸ, ಕಚೇರಿ ಕೆಲಸ, ಪ್ಯಾಕಿಂಗ್ ಕೆಲಸ ಸೇರಿದಂತೆ ವಿವಿಧ ಹಂತದ ಕೆಲಸಗಾರರು ಬೇಕು ಎಂದು ಅಮೇಜಾನ್ ಸಂಸ್ಥೆ ಪ್ರಕಟಿಸಿದೆ.
ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಮುಖ್ಯ. ಆದ್ದರಿಂದ ಜನರು ಮಾರುಕಟ್ಟೆ ಬರುವ ಪ್ರಮಾಣ ನಗರ ಪ್ರದೇಶಗಳಲ್ಲಿ ಕಡಿಮೆ ಆಗುತ್ತಿದೆ. ಆದ್ದರಿಂದ ಆನ್ ಲೈನ್ ನಲ್ಲಿ ಖರೀದಿ ಹೆಚ್ಚಾಗಿದೆ. ಹಾಗಾಗಿ ಕೆಲಸಗಾರರು ಬೇಕಾಗಿದ್ದಾರೆ. ಆನ್ ಲೈನ್ ನಲ್ಲಿ ಶಾಪ್ ಮಾಡಿರುವ ವಸ್ತುಗಳನ್ನು ಮನೆಗೆ ತಲುಪಿಸುವ ಕೆಲಸದಿಂದ ಕೊರೊನಾ ಹರಡುವಿಕೆ ಕಡಿಮೆ ಮಾಡಬಹುದು ಎಂಬುದು. ಅಲ್ಲದೆ ಆರ್ಥಿಕ ಸಂಕಷ್ಟ ದಿಂದ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಹೊತ್ತಿನಲ್ಲೇ ಅಮೇಜಾನ್ ಸಂಸ್ಥೆ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಪ್ರಕಟಿಸಿದೆ. ಇದು ಉದ್ಯೋಗ ಕಳೆದುಕೊಂಡವರಲ್ಲಿ ಆಶಾ ಭಾವನೆ ಹುಟ್ಟಿಸಿದೆ.








