Kohli Vs Suranga | ಶ್..! ಅಲ್ಲಿರೋದು ಕಿಂಗ್ಸ್ ಕೊಹ್ಲಿ…
ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಸಾಮಾನ್ಯವಾಗಿಯೇ ಅಗ್ರೆಸಿವ್ ಆಗಿ ಕಾಣಿಸುತ್ತಾರೆ.
ಎದುರಾಳಿ ಬೌಲರ್ಗಳನ್ನು ತಮ್ಮ ಅಮೋಘ ಬ್ಯಾಟಿಂಗ್ನಿಂದ ಬೆದರಿಸೋದ್ರಲ್ಲಿ ವಿರಾಟ್ ಸಿದ್ಧಹಸ್ತರು.
ಟೀಂ ಇಂಡಿಯಾದ ನಾಯಕನಾಗಿ ಹಲವು ಬಾರಿ ತಮ್ಮ ಅಗ್ರೆಸ್ಸಿವ್ ಆಟಿಟ್ಯೂಡ್ ಯಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಈಗ ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಲ್ ಆಗಿದ್ರೆ ಮಜಾ ಇರುತ್ತಾ..?
ಅದಕ್ಕೆ ಲಂಕಾ ಬೌಲರ್ ಸುರಂಗ ಲಖ್ಮಲ್ ಅವರತ್ತ ವಿರಾಟ್ ಸ್ಟನ್ನಿಂಗ್ ಲುಕ್ ನೀಡಿ ಬೆದರಿಸಿದ್ದಾರೆ.
ಟೀಂ ಇಂಡಿಯಾ ಇನಿಂಗ್ಸ್ ನ 27ನೇ ಓವರ್ ನಲ್ಲಿ ಕೊಹ್ಲಿ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
https://twitter.com/i/status/1499638266227683329
ಈ ವೇಳೆ ನಾನ್ ಸ್ಟ್ರೈಕ್ ಕಡೆ ಹೋಗುತ್ತಿದ್ದ ವಿರಾಟ್ ಕೊಹ್ಲಿಯನ್ನ ಲಕ್ಮಲ್ ಕೆಣಕಿದ್ರು. ಇಲ್ಲಿಗೆ ವಿರಾಟ್ ಕೊಹ್ಲಿ ಸಿರಿಯಸ್ ಮೂಡ್ ಗೆ ಹೋದ್ರು.
ಕೋಪಗೊಂಡು ಹಿಂದೆ ತಿರುಗಿ ಸ್ಟನ್ನಿಂಗ್ ಲುಕ್ ಕೊಟ್ರು. ಅದನ್ನ ಕಂಡ ಲಖ್ಮಲ್ ಸುಮ್ಮನಾದ್ರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
100ನೇ ಟೆಸ್ಟ್ ನಲ್ಲಿ ಕೊಹ್ಲಿ ಶತಕ ಸಿಡಿಸುತ್ತಾರೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು.
45 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಆಡಿದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಕೊಹ್ಲಿ ವಿಫಲರಾದರು. ಲಸಿತ್ ಎಂಬುಲ್ಡೆನಿಯಾ ಬೌಲಿಂಗ್ನಲ್ಲಿ ಸೂಪರ್ ಎಸೆತಕ್ಕೆ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.
Virat Kohli Vs Suranga Lakmal








