ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

31 ವರ್ಷಕ್ಕೇ ಮಿಂಚಿ ಮರೆಯಾದ “ಆರತಿ ಅಗರವಾಲ್” ಜನ್ಮ ದಿನ…

Naveen Kumar B C by Naveen Kumar B C
March 5, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

31 ವರ್ಷಕ್ಕೇ ಮಿಂಚಿ ಮರೆಯಾದ “ಆರತಿ ಅಗರವಾಲ್” ಜನ್ಮ ದಿನ…

ಇಂದು ತೆಲುಗು ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿ ಆರತಿ ಅಗರ್ವಾಲ್ ಅವರ ಜನ್ಮದಿನ. ಆರತಿ ಮಾರ್ಚ್ 5 ರಂದು ನ್ಯೂಜೆರ್ಸಿಯಲ್ಲಿ ಜನಿಸಿದರು. ಆರತಿ 14 ವರ್ಷದವಳಿದ್ದಾಗ, ಪೆನ್ಸಿಲ್ವೇನಿಯಾ ನಗರದ ಫಿಲಡೆಲ್ಫಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸುನೀಲ್ ಶೆಟ್ಟಿ ಅವರಿದ್ದ ವೇದಿಕೆಯಲ್ಲಿ ಡ್ಯಾನ್ಸ್ ನೋಡಿ ಗಮನ ಸೆಳೆದಿದ್ದರು.  ಆಕೆಯ ಡ್ಯಾನ್ಸ್ ನೋಡಿದ ಸುನೀಲ್ ಶೆಟ್ಟಿ ಅವರು ಆರತಿ ಅವರ ತಂದೆಗೆ ಬಾಲಿವುಡ್‌ನಲ್ಲಿ  ಪರಿಚಯಿಸುವಂತೆ ಹೇಳಿದರು.

16ನೇ ವಯಸ್ಸಿಗೆ ಪಾದಾರ್ಪಣೆ

ಆರತಿ 16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  2001 ರಲ್ಲಿ ಬಾಲಿವುಡ್ ಚಲನಚಿತ್ರ ‘ಪಾಗಲ್ಪನ್’ ಮತ್ತು ಅದೇ ವರ್ಷ ತೆಲುಗಿನ ವಿಕ್ಟರಿ ವೆಂಕಟೇಶ ಜೊತೆ ‘ನುವ್ವು ನಾಕು ನಚಾವ್’ ಮೂಲಕ ತೆಲುಗು ಚಿತ್ರರಂಗಕ್ಕೆ  ಪಾದಾರ್ಪಣೆ ಮಾಡಿದರು.  ತೆಲುಗಿನ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.  ಅಲ್ಲದೆ, ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಜೂನಿಯರ್ ಎನ್ಟಿಆರ್, ಪ್ರಭಾಸ್ ಸೇರಿದಂತೆ ಅನೇಕ ಘಟಾನುಘಟಿಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಆರತಿ ಆತ್ಮಹತ್ಯೆಗೂ ಯತ್ನಿಸಿದ್ದರು…

ಸಹನಟ ತರುಣ್ ಜೊತೆಗಿನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿ 2005ರಲ್ಲಿ ಆತ್ಮಹತ್ಯೆ ಯತ್ನಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ಥೂಲಕಾಯದಿಂದ ಬಳಲುತ್ತಿದ್ದ ಆರತಿ,  ತಾವು ಮರಣವಪ್ಪುವ  ಒಂದು ತಿಂಗಳ ಮೊದಲು ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಮೂಲಕ ಅವರ ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಹೈದರಾಬಾದ್ ನ ವೈದ್ಯರು ಸಲಹೆ ನೀಡಿದ್ದರೂ ವೈದ್ಯರ ಮಾತಿಗೆ ಕಿವಿಗೊಟ್ಟಿರಲಿಲ್ಲ. ಈ ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯನ್ನು ಅನುಭವಿಸಿದರು.

ಹೆಚ್ಚಿನ ಚಿಕಿತ್ಸೆಗಾಗಿ ಆರತಿ ಅವರನ್ನ  ನ್ಯೂಜೆರ್ಸಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಮತ್ತೊಂದು ಆಪರೇಷನ್ ಒಳಗಾಗಬೇಕಾಗಿತು.  ಆದರೆ ಇದ್ದಕ್ಕಿದ್ದಂತೆ ಅವರು ಸಾವನ್ನಪ್ಪಿದ್ದರು. ಆರತಿಯ ಮರಣದ ನಂತರ, ಆಕೆಯ ಮ್ಯಾನೇಜರ್ ಅವರು ಸ್ಥೂಲಕಾಯತೆ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು,  ಚಿಕಿತ್ಸೆಯ  ವೇಳೆ  ಹೃದಯಾಘಾತದಿಂದ ಸಾವನ್ನಪ್ಪಿದ್ದರು.

 ಜೂನ್ 6, 2015 ರಂದು ನ್ಯೂಜೆರ್ಸಿಯಲ್ಲಿ ನಿಧನರಾದಗ ಆರತಿಯವರ ವಯಸ್ಸು ಕೇವಲ 31 ವರ್ಷ. ಅವರ ಸಾವಿನ ಒಂದು ದಿನ ಮೊದಲು ಅಂದರೆ ಜೂನ್ 5, 2015 ರಂದು ಅವರ ಅಭಿನಯದ ಕೊನೆಯ ಚಿತ್ರ ‘ರಣಂ-2’ ಬಿಡುಗಡೆಯಾಗಿತ್ತು.  ಶಸ್ತ್ರಚಿಕಿತ್ಸೆಗಾಗಿ ಆರತಿ ಈ ಹಿಂದೆ ಹೈದರಾಬಾದ್ ಮೂಲದ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ವೈದ್ಯರು ಶಸ್ತ್ರ ಚಿಕಿತ್ಸೆಗೆ ನಿರಾಕರಿಸಿದ್ದರು.

Related posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026
ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

March 20, 2026

ಆರತಿ ಸ್ಥೂಲ ಕಾಯದಿಂದ ಬಳಲುತ್ತಿದ್ದ ಕಾರಣಕ್ಕೆ ಸಿನಿಮಾಗಳ ಆಫರ್  ನಿಂತು ಹೋಗಿತ್ತು.  ಇದು ನಟಿಯ ಖಿನ್ನತೆಗೆ ಕಾರಣವಾಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿದ್ದರು, ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು. ಇದೆಲ್ಲರಿಂದ ಹೊರಬರಲು ಅವರು ಆಯ್ದುಕೊಂಡಿದ್ದು  ಶಸ್ತ್ರ ಚಿಕಿತ್ಸೆ. ಬೊಜ್ಜು ಹೋಗಲಾಡಿಸಲು  ಶಸ್ತ್ರಚಿಕಿತ್ಸೆಗೆ ಒಳಪಡುವ ಮಾರ್ಗ ಆರಿಸಿಕೊಂಡಿದ್ದು ಅವರ ಜೀವಕ್ಕೆ ಸಂಚಕಾರ ತಂದಿತು…

Today is the birthday of actress Aarti Agarwal, who shone in the Telugu cinema

Tags: arathi agarawalTelugu cinemaTollywood
ShareTweetSendShare
Join us on:

Related Posts

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram